ನಂದಗಡ ಪೋಲಿಸ್ ಠಾಣೆ ವತಿಯಿಂದ ಮನೆ -ಮನೆಗೆ ಪೋಲಿಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು
ಬೆಳಗಾವಿ ಜಿಲ್ಲಾ ಪೋಲಿಸ್, ಬೈಲಹೊಂಗಲ ಉಪ ವಿಭಾಗದ ನಂದಗಡದ ಪೋಲಿಸ್ ಠಾಣೆಯವತಿಯಿಂದ ಮನೆ -ಮನೆಗೆ ಪೋಲಿಸ್-2025 ಕಾರ್ಯಕ್ರಮ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಸುಮಾರು
ಒಂದುನೂರಾ ಒಂದು ಹಳ್ಳಿಗಳ ಸಮಾವೇಶ ಇರುವ ನಂದಗಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಪಿಎಸ್ಐ ಸಪಾಟೆ ಅವರು ಮನೆ -ಮನೆಗೆ ಪೋಲಿಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಸಂಶಯಾಸ್ಪದ ಜನರ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಕಳ್ಳತನ ಮತ್ತು ಇನ್ನಿತರ ಅಪರಾಧಗಳನ್ನು ತಡೆಗಟ್ಟಲು ಸಹಕರಿಸಿ ಎಂದು ಹೇಳಿ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ
ಅದರಂತೆಯೇ ಪೋಲಿಸ್ ವಿಜಯ ಪಾಟೀಲ್ , ಹವಾಲ್ದಾರ್ ಶಿವಾನಂದ ತುರಮರಿ, ಎನ್.ಬಿ.ಬೆಳವಡಿ, ಚಂದರಗಿ ಸೇರಿದಂತೆ ಇನ್ನಿತರರು ನಂದಗಡ, ಬೀಡಿ, ಹಲಸಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು ಸಾರ್ವಜನಿಕರೊಂದಿಗೆ ಪೋಲಿಸರು ಆತ್ಮೀಯವಾಗಿ ಬೆರೆತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಕಳ್ಳತನ, ಅಪರಾಧಗಳನ್ನು ತಡೆಗಟ್ಟಲು ನಿಟ್ಟಿನಲ್ಲಿ ಮಾಡುತ್ತಿರುವ ಜಾಗೃತಿ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ.