Breaking News

ರೈತನಿಗೆ ದೋಷಯುತ ಕೊಯ್ಲುಯಂತ್ರ ನೀಡಿದ ಕಂಪನಿಗೆ ದಂಡ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

Spread the love

ರೈತನಿಗೆ ದೋಷಯುತ ಕೊಯ್ಲುಯಂತ್ರ ನೀಡಿದ ಕಂಪನಿಗೆ ದಂಡ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ
ಧಾರವಾಡ – ರೈತರೊಬ್ಬರಿಗೆ ದೋಷಯುತ ಕೊಯ್ಲುಯಂತ್ರ ನೀಡಿದ ಕಂಪನಿಯ ವಿರುದ್ಧ ಅನ್ನದಾತ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ ಬೆನ್ನಲೆ ಆಯೋಗವು ಕೂಲಂಕುಷವಾಗಿ ವಿಚಾರಣೆ ನಡೆಸಿ ರೈತನಿಗೆ ಕಂನಿಯಿಂದ ಪರಿಹಾರ ಜತೆಗೆ ದಂಡ ವಿಧಿಸುವ ಮೂಲಕ ನ್ಯಾಯ ಒದಗಿಸಿ ಆದೇಶ ಹೊರಡಿಸಿದೆ.
ನವಲಗುಂದದ ನಿವಾಸಿ ದ್ಯಾಮಪ್ಪ ಹಂಚಿನಾಳ ಎನ್ನುವವರು ವೃತ್ತಿಯಲ್ಲಿ ವ್ಯವಸಾಯವನ್ನು ಅವಲಂಬಿಸಿದ್ದಾರೆ. ತಮ್ಮ ಉಪಜೀವನಕ್ಕಾಗಿ ಬೆರೆಯವರು ಬೆಳೆಗಳನ್ನು ಹಾರ್ವೆಸ್ಟಿಂಗ ಮಷೀನ್ನ ಮುಖಾಂತರ ಕೊಯ್ಯಲು ಈ ಮಷೀನನ್ನು ಅವರು ಗುರು ಹಿಂದುಸ್ಥಾನ ಅಗ್ರೊ ಇಂಡಸ್ಟ್ರೀಯಿಂದ ಖರೀದಿಸಿದ್ದರು. ಅದಕ್ಕೆಅವರು ರೂ.3,50,000 ಬ್ಯಾಂಕಿನಿಂದ ಲೋನ್ ಪಡೆದು ಪಾವತಿಸಿದ್ದರು.
ಖರೀದಿಸುವ ಸಮಯದಲ್ಲಿ ಎದುರುದಾರರು ಮಷೀನು ಬೆಳೆಯನ್ನು ಕೊಯ್ಲು ಮಾಡುವಾಗ ಅದು ಬೆಳೆ ಮತ್ತು ಹೊಟ್ಟನ್ನು ಬೇರ್ಪಡಿಸುತ್ತದೆ ಅಂತ ಹೇಳಿದ್ದರು. ಆದರೆ ದೂರುದಾರರು ಅದನ್ನು ವ್ಯವಸಾಯದಲ್ಲಿ ಉಪಯೋಗಿಸಲು ಪ್ರಾರಂಭಿಸದ ನಂತರ, ಅದು ಎದುರುದಾರರು ಹೇಳಿದ ರೀತಿ ಮಾಡದೇ ಬೆಳೆ ಮತ್ತು ಹೊಟ್ಟು ಎರಡನ್ನು ಒಟ್ಟು ಗೂಡಿಸಿ ವಿಸರ್ಜಿಸುತ್ತಿತ್ತು.
ಈ ವಿಷಯವನ್ನು ದೂರುದಾರರು ತಮ್ಮ ನೆರೆಯ ರೈತರನ್ನು ವಿಚಾರಿಸಲು ಅವರಿಗೂ ಸಹ ಇಂತಹದೇ ಸಮಸ್ಯೆ ಬಂದಿರುವುದು ಗೊತ್ತಾಯಿತು. ಆದರೆ ಯಂತ್ರ ಸರಿ ಇಲ್ಲದ ಕಾರಣ ದೂರುದಾರರ ಉಪಜೀವನಕ್ಕೆ ತುಂಬಾ ತೊಂದರೆಯಾಗಿ ಮತ್ತು ಬ್ಯಾಂಕಿಗೆ ಲೋನನ್ನು ತುಂಬದೇ ಬಹಳ ನಷ್ಟವನ್ನು ಅನುಭವಿಸಿರುತ್ತಾರೆ.ಕೊನೆಗೆ ದೂರುದಾರರು ಆ ಯಂತ್ರವನ್ನು ಎದುರುದಾರರ ಡೀಲರಾದ ಗಣಾಚಾರಿ ಅಗ್ರಿಕಲ್ಚರ್ ಇಂಡಸ್ಟ್ರೀಸ್ ಬೆಳಗಾವಿ ಇವರಿಗೆ ಮರಳಿಸಿರುತ್ತಾರೆ.
ಆದರೆ ಇವತ್ತಿನವರೆಗೂ ಎದುರುದಾರರು ಆ ಮಷೀನನ್ನು ಸರಿಪಡಿಸಿ ಕೊಟ್ಟಿರುವುದಿಲ್ಲ.
ಇದರಿಂದ ಮನನೊಂದರೈತ ಗ್ರಾಹಕ ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:12/07/2024ಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ರೂ.3,50,000 ಪಾವತಿಸಿ ತನ್ನ ಉಪಜೀವನಕ್ಕೆ ಅನುಕೂಲವಾಗಲೆಂದು ಹಾರ್ವೆಸ್ಟಿಂಗ ಮಷೀನ್ನ್ನು ಎದುರುದಾರರಿಂದ ಖರೀದಿಸಿರುವುದು ದಾಖಲೆಗಳ ಮುಖಾಂತರ ಕಂಡು ಬರುತ್ತದೆ. ಆದರೆ ಖರೀದಿಸಿದ ನಂತರ ಆ ಮಷೀನು ಎದುರುದಾರರು ಹೇಳಿದಂತೆ ಸರಿಯಾಗಿ ಕೆಲಸ ಮಾಡದೇ ಇರುವುದು ದೂರುದಾರರಿಗೆ ಆರ್ಥಿಕ ನಷ್ಟಕ್ಕೆ ಹೊಣೆಯಾಗಿರುತ್ತದೆ.
ದೂರುದಾರರು ಬ್ಯಾಂಕನಿಂದ ಲೋನ ಪಡೆದು ಅದನ್ನು ಖರೀದಿಸಿದರೂ ಅದರ ಉಪಯೋಗವಿಲ್ಲದೆ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವುದು ಆಯೋಗಕ್ಕೆ ಕಂಡು ಬಂದಿರುತ್ತದೆ. ಅಲ್ಲದೇ ಮಷೀನು ಎದುರುದಾರರ ಬಳಿಯೇ ಇದ್ದು ಅವರು ಅದನ್ನು ಸರಿಪಡಿಸಿ ದೂರುದಾರರಿಗೆ ಕೊಡದೇ ಇರುವುದು ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ದೂರುದಾರರು ಮಷೀನ ಕೊಟ್ಟಂತಹ ರೂ.3,50,000 ಗಳನ್ನು ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಎದುರುದಾರರಿಗೆ ಆಯೋಗ ಆದೇಶಿಸಿದೆ.
ರೈತನಾಗಿ ತನ್ನ ಉಪಜೀವನಕ್ಕಾಗಿ ಯಂತ್ರವನ್ನು ಖರೀದಿಸಿ ಅದು ಸರಿಯಾಗಿ ಕೆಲಸ ಮಾಡದಿರುವುದರಿಂದ ಅವರಿಗೆ ಆದ ಅನಾನುಕೂಲ, ಮಾನಸೀಕ ತೊಂದರೆಗೆ ರೂ. ಒಂದು ಲಕ್ಷ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ 10 ಸಾವಿರಗಳನ್ನು ದೂರುದಾರರಿಗೆ ಕೊಡಲು ಎದುರುದಾರರಾದ ಗುರು ಹಿಂದುಸ್ಥಾನ ಅಗ್ರೋ ಇಂಡ್ರಸ್ಟ್ರೀಸ್ಗೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

Spread the love

About Laxminews 24x7

Check Also

ಆರ್​​ಎಸ್​​ಎಸ್ ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ : ಶೆಟ್ಟರ್

Spread the loveಹುಬ್ಬಳ್ಳಿ : ಆರ್​​ಎಸ್​​ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ. ಇದು ನಿಮ್ಮ ಅಂತ್ಯದ ಆರಂಭ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ