Breaking News

ನರೇಗಾ ಕಾರ್ಮಿಕರ ಮದುವೆಯ 60ನೇ ವಾರ್ಷಿಕೋತ್ಸವ

Spread the love

ಹೇಗಿತ್ತು ನೋಡಿ…ನರೇಗಾ ಕಾರ್ಮಿಕರ ಮದುವೆಯ 60ನೇ ವಾರ್ಷಿಕೋತ್ಸವ
ಇಲ್ಲಿ ಯಾವುದೇ ಮಂಟಪವಿರಲಿಲ್ಲ, ವಾದ್ಯ ಮೇಳ ಗಟ್ಟಿ ಮೇಳದ ಸದ್ದಿರಲಿಲ್ಲ, ಬಂಧುಗಳು ಬಳಗದವರು ಬಣ್ಣ ಬಣ್ಣದ ಬಟ್ಟೆ ತೊಟ್ಟಿರಲಿಲ್ಲ, ವಧು-ವರರೂ ಅಷ್ಟೇ ತುಂಬ ಸಿಂಪಲ್ ಆದರೂ ಅಲ್ಲೊಂದು ಮದುವೆ ಆಯ್ತು. ಹೇಂಗಂತೀರಾ ಈ ಸ್ಟೋರಿ ನೋಡಿ.
ಆಕಾಶವೇ ಮಂಟಪವಾದ ಜಿಟಿ ಜಿಟಿ ಮಳೆಯೇ ವಧುವರರನ್ನು ಆಶೀರ್ವದಿಸಿದ ಅಪರೂಪದ ಮದುವೆಯೊಂದು ನಡೆದಿದ್ದು ಇದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಗ್ರಾಮದ ಹೊರವಲಯದಲ್ಲಿ. ರುದ್ರಪ್ಪ ಗಂಗಪ್ಪ ತಿಗಡಿ ಮತ್ತು ಬಸವ್ವ ರುದ್ರಪ್ಪ ತಿಗಡಿ ದಂಪತಿಗಳಿಗೆ ಅರವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ನರೇಗಾ ಕೂಲಿ ಕಾರ್ಮಿಕರು ಸೇರಿ ಇವರಿಬ್ಬರಿಗೂ ಮದುವೆ ಮಾಡಿಸುವ ಮೂಲಕ ಸಂಭ್ರಮ ಸಡಗರದ ವಾತಾವರಣ ರೂಪಿಸಿದ್ದಾರೆ.
ಅಪ್ಪಟ ಗ್ರಾಮೀಣ ಪ್ರದೇಶದ ಮದುವೆಯ ಮಾದರಿಯಲ್ಲೇ ವಧುವಿನ ಇದಿರು ಭೇಟ್ಟಿ ಕಾರ್ಯಕ್ರಮ ಸೋಬಾನೆ ಹಾಡುಗಳ ಸಂಭ್ರಮ ಸುರಿಗೆ ನೀರೆರೆದು ವಧುವರರನ್ನು ಸಂಭ್ರಮದಲ್ಲಿ ತೋಯ್ದು ತೊಪ್ಪೆಯಾಗಿಸಿದ್ದಾರೆ. ಕಾರ್ಮಿಕರೆಲ್ಲ ಸೇರಿ ಹಣ ಸಂಗ್ರಹಿಸಿ ಅರವತ್ತರ ಸಂಭ್ರಮದಲ್ಲಿರುವ ದಂಪತಿಗಳಿಗೆ ಮತೊಮ್ಮೆ ಮದುವೆಯ ಸಂಭ್ರಮದ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡಿದ ಈ ಘಟನೆ ಸದ್ಯ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.ಕಾರ್ಮಿಕರು ಕೆಲಸದ ಬುಟ್ಟಿಗಳನ್ನೇ ವಾದ್ಯಗಳನ್ನಾಗಿ ನುಡಿಸಿ ಸಂಭ್ರಮಿಸಿದರೆ ವಧೂವರರ ಮುಖದಲ್ಲಿ ಸಂಭ್ರಮ ಸಡಗರ ತುಂಬಿ ತುಳುಕುತ್ತಿತ್ತು.
ಅಪ್ಪಟ ದೇಸಿ ಶೈಲಿಯ ಮದುವೆ ಮಾಡಿಸಿ ಪರಸ್ಪರ ಹೂ ಮಾಲೆ ಬದಲಿಸಿದ ವಧುವರರು ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.ಯಾವುದೇ ಪೂರ್ವ ತಯಾರಿ ಇಲ್ಲದೇ ತಕ್ಷಣದಲ್ಲಿ ಈ ದಂಪತಿಗಳಿಗೆ ಅರವತ್ತರ ಷಷ್ಠಿ ಪೂರ್ತಿ ಸಂಭ್ರಮಾಚರಣೆ ಮಾಡಿದ ನರೇಗಾ ಕಾರ್ಮಿಕರ ಈ ಕಾರ್ಯಕ್ರಮಕ್ಕೆ ನೆಟ್ಟಿಗರು ಶಹಬ್ಬಾಷ್ ಎಂದಿದ್ದಾರೆ.

Spread the love

About Laxminews 24x7

Check Also

ಖಾನಾಪೂರದ ಅಸೋಗಾ ರಸ್ತೆಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯ ತಡೆಗೋಡೆ ಕುಸಿತ

Spread the love ಖಾನಾಪೂರದ ಅಸೋಗಾ ರಸ್ತೆಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯ ತಡೆಗೋಡೆ ಕುಸಿತ ಖಾನಾಪೂರದ ರೇಲ್ವೆ ನಿಲ್ದಾಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ