Breaking News

ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು

Spread the love

ಯಾದಗಿರಿ, ಜೂನ್​ 25: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆಯುತ್ತಾ ಬಂದಿದೆ. ಆದರೂ ದೇಶದಲ್ಲಿ ಇನ್ನು ಕೂಡ ಅನಿಷ್ಟ ಪದ್ಧತಿಗಳು ಜೀವಂತ ಇದೆ. ಕಾನೂನು ಇದರೂ ದಲಿತರ (Dalits) ಮೇಲೆ ಇನ್ನು ಕೂಡ ದೌರ್ಜನ್ಯಗಳು ನಡೆಯುತ್ತಿವೆ. ಇಂತಹದೇ ಒಂದು ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ನಡೆದಿದ್ದು, ಸವರ್ಣೀಯರ (upper caste) ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ದಲಿತರಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

ಜಿಲ್ಲೆಯ ಚಿನ್ನಕಾರ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ನಡೆದು ಹೋಗಿದೆ. ಸ್ವಾತಂತ್ರ್ಯ ಭಾರತ ಸಂವಿಧಾನ ಜಾರಿಯಲ್ಲಿರುವ ಈ ದೇಶದಲ್ಲಿ ಈಗಲು ಇಂತಹ ಘಟನೆಗಳು ನಡೆಯುತ್ತಿವೆ ಅನ್ನೋದ್ದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಈ ಗ್ರಾಮದಲ್ಲಿ ಸವರ್ಣೀಯರ ಮಾತು ಕೇಳದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಇದೆ ಕಾರಣಕ್ಕೆ ನಿನ್ನೆ ಸಂಜೆ ಚಿನ್ನಕಾರ ಗ್ರಾಮದ ದಲಿತರು ಜಿಲ್ಲಾಧಿಕಾರಿ ಹಾಗೂ ಸಮಾಜ‌‌ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಡೆದದ್ದೇನು?

ಅಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು ಅಂದರೆ 2017 ರಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರಿಂದ 6 ಗುಂಟೆ ಜಾಗವನ್ನ ಸರ್ಕಾರ ಮಂಜೂರು ಮಾಡಿತ್ತು. ಆದರೆ ಕಾರಣಾಂತರಗಳಿಂದ ಭವನ ಇದುವರೆಗೆ ನಿರ್ಮಾಣ ಆಗಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಸವರ್ಣೀಯರು, ಭವನಕ್ಕೆ ಮಂಜೂರದ ಜಾಗದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ಇದೆ ಕಾದಣಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಜೂನ್ 20 ರಂದು ಜೆಸಿಬಿ ಮೂಲಕ ಜಾಗವನ್ನ ಕ್ಲೀನ್ ಮಾಡಿ ಪಂಚಾಯತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು.


Spread the love

About Laxminews 24x7

Check Also

ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ

Spread the love ಹೊಲಕ್ಕೆ ದಾರಿ ಬಿಡಿಸಿಕೊಡಲು ಆಗ್ರಹಿಸಿ ರೈತರಿಂದ ರಸ್ತೆ ಬಂದ್ ಮಾಡಿ ಪ್ರತಿಭಟನೆ  ರೈತರು ತಮ್ಮ ಜಮೀನಿಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ