ಕೌಶಲ್ಯ ತರಬೇತಿಯಲ್ಲಿ ಮಹಿಳೆಯರಿಗೆ ಹಂಚಿಕೆ ಮಾಡಬೇಕಿದ್ದ ಹೊಲಿಗೆ ಯಂತ್ರವನ್ನು ಕೊಡದೆ ಮೋಸ ಮಾಡಿದ ಮಲ್ಲಿಕಾರ್ಜುನ ವಿದ್ಯಾಪೀಠದ ಗುರುಗೌಡ ಪಾಟೀಲ್ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ಶ್ರೀನಗರದ ವೈಷ್ಣವಿ ಮಹಿಳಾ ಮಂಡಳದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೌಶಲ್ಯ ತರಬೇತಿ ಕೇಂದ್ರದಲ್ಲಿ ಸುಮಾರು 30ಜನ ಮಹಿಳೆಯರು ತರಬೇತಿ ಪಡೆದಿದ್ದಾರೆ. ಅವರಿಗೆ ಹೊಲಿಗೆ ಯಂತ್ರಗಳನ್ನು ಕೊಡುವುದಾಗಿ ಅನಗೋಳದಲ್ಲಿ ಕರೆದು ಮಹಿಳೆಯರಿಗೆ ಅವಮಾನ ಮಾಡಿರುವ ಗುರುಗೌಡ ಪಾಟೀಲ್ ಮೇಲೆ ಕ್ರಮ ಜರುಗಿಸಿ ಹೊಲಿಗೆ ಯಂತ್ರಗಳನ್ನು ಕೊಡಿಸುವಂತೆ ಮನವಿ ಮಾಡಿದರು.
ಅಖಲಾ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.