ಬೆಂಗಳೂರಿನಲ್ಲಿ ಜೈ ಹಿಂದ್ ಸಭಾ ಕಾರ್ಯಕ್ರಮ…ದೇಶದ ಸೈನಿಕರಿಗೆ ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತೇವೆ…
ಮಿಲಿಟರಿ ಕ್ಯಾಂಟಿನ್’ಗಳಿಗೆ ಅಬಕಾರಿ ಸುಂಕ ಹೇರುವುದಿಲ್ಲ; ಸಿಎಂ ಸಿದ್ಧರಾಮಯ್ಯ ಘೋಷನೆ
ತಂದೆ-ತಾಯಿ ಅನ್ನ ನೀಡುವವರ ಸ್ಥಾನದಲ್ಲಿ ನಾವು ಯೋಧರನ್ನು ಕಾಣುತ್ತೇವೆ. ಅವರೊಂದಿಗೆ ನಾವಿದ್ದೇವೆ. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಿಗಮ ರಚಿಸಲು ಕೂಡ ಸರ್ಕಾರ ಪ್ರಯತ್ನಿಸಲಿದೆ. ಮಿಲಿಟರಿ ಕ್ಯಾಂಟಿನ್’ಗಳಿಗೆ ಅಬಕಾರಿ ಸುಂಕವನ್ನು ಹೇರುವುದಿಲ್ಲವೆಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದರು.
ಇಂದು ಬೆಂಗಳೂರಿನ ಟೌನ್ ಹಾಲ್’ನಲ್ಲಿ ನಮ್ಮ ದೇಶದ ವೀರ ಯೋಧರಿನಗೆ ನಮನ ಸಲ್ಲಿಸಲು ಮತ್ತು ಸಶಸ್ತ್ರ ಪಡೆಗಳ ಬೆಂಬಲಕ್ಕೆ ನಿಲ್ಲಲು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ವತಿಯಿಂದ ಭಾರತೀಯ ಸೇನೆಯೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡುವ ಉದ್ಧೇಶದಿಂದ ಜೈ ಹಿಂದ್ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು
ಭಾರತ ಮತ್ತು ಪಾಕಿಸ್ತಾನ ವಿಭಾಜನೆಯಾದಾಗಿನಿಂದ ತಿಕ್ಕಾಟ ಇದ್ದೇ ಇದೆ. ಉಗ್ರರರನ್ನು ಪೋಷಿಸಿಸುವ ಪಾಕಿಸ್ತಾನ ಸದಾ ಭಾರತಕ್ಕೆ ತೊಂದರೆ ನೀಡುತ್ತದೆ. ಉಗ್ರರನ್ನು ಮಟ್ಟ ಹಾಕುವುದು ನಮ್ಮ ಜವಾಬ್ದಾರಿ ಮತ್ತು ಕರ್ತ್ಯವ್ಯ. ದೇಶದಲ್ಲಿ ಅನ್ನ ನೀಡುವವರು, ವೈದ್ಯರು ಮತ್ತು ತಂದೆ ತಾಯಿಯರನ್ನು ನೋಡುವ ಸ್ಥಾನದಲ್ಲೇ ಯೋಧರನ್ನು ಕೂಡ ನೆನಪಿಸಿಕೊಳ್ಳುತ್ತಾರೆ. ಯೋಧರು ಸದಾ ಸ್ಮರಣೀಯರು. ದೇಶದ ಸಾರ್ವಭೌಮ್ಯತೆ, ಐಕ್ಯತೆ, ಒಗ್ಗಟ್ಟು, ರಕ್ಷಣೆಗೆ ಯೋಧರೇ ಕಾರಣ. ದೇಶದ ರಕ್ಷಣೆಯ ವಿಚಾರದಲ್ಲಿ 140 ಕೋಟಿ ಜನ ಒಂದಾಗುತ್ತಾರೆ. ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸುವ ಯೋಧರೊಂದಿಗೆ ನಾವೆಲ್ಲರೂ ಕೂಡ ನಿಮ್ಮೊಂದಿಗಿದ್ದೇವೆ ಎಂದರು.
ಮುಂದುವರೆದು ಮಾತನಾಡಿದ ಅವರು ಶಿಷ್ಟ ರಕ್ಷಣೆ ದುಷ್ಟ ಸಂಹಾರವೆಂಬಂತೆ ಪೆಹಲಗಾಮ್ ಘಟನೆ ಬಳಿಕೆ ಉಗ್ರರ ಅಡುಗುತಾಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಧ್ವಂಸ ಮಾಡುವ ಕಾರ್ಯ ನಮ್ಮ ಯೋಧರು
ಮಾಡಿರುವುದು ಹೆಮ್ಮೆಯ ವಿಚಾರ ಎಂದರು. ದೇಶದ ಯೋಧರಿಗೆ ಜನ್ಮ ನೀಡಿದವರು ವೀರ ಮಾತೆಯರು ವೀರ ತಂದೆಯರು.
ಮಿಲಿಟರಿ ಕ್ಯಾಂಟಿನ್’ಗಳಿಗೆ ಅಬಕಾರಿ ಸುಂಕವನ್ನು ಹೇರುವುದಿಲ್ಲವೆಂದು ಘೋಷಿಸಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ನಿಗಮ ರಚಿಸಲು ಕೂಡ ಸರ್ಕಾರ ಪ್ರಯತ್ನಿಸಲಿದೆ ಎಂಬ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್. ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಸಿಎಂ ರಾಜ್ಯದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ, ನಾಸೀರ್ ಹುಸೇನ್, ಕಾರ್ಯಾಧ್ಯಕ್ಷ ಚಂದ್ರಶೇಖರ್, ಏರವೈಸ್ ಮಾರ್ಷಲ್ ಅಝೀಜ್ ಜಾವೀದ್, ನಾಗರಾಜ್, ಮೇಜರ್ ಜನರಲ್ ಬಸವರಾಜ್, ಲೆಫ್ಟಿನೆಂಟ್ ಜನರಲ್ ಪ್ರಸಾದ್, ರೇರ್ ಅಡ್ಮಿರಲ್ ಸಂಪತ್ ಗೋಪಾಲ್ ಸೇರಿದಂತೆ ನಿವೃತ್ತ ಸೇನಾಧಿಕಾರಿಗಳು ಮತ್ತು ಇನ್ನುಳಿದವರು ಉಪಸ್ಥಿತರಿದ್ಧರು.