ಶಿವಮೊಗ್ಗ: ಮುಂಗಾರುಪೂರ್ವ ಮಳೆಗೆ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, 5 ಕ್ರಸ್ಟ್ ಗೇಟುಗಳ ಮೂಲಕ ನದಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಅಣೆಕಟ್ಟಾಗಿದೆ.
ಅಣೆಕಟ್ಟೆಗೆ 7,500 ಕ್ಯೂಸೆಕ್ ನೀರು ಒಳ ಹರಿವು ಇರುವ ಕಾರಣ ಐದು ಕ್ರಸ್ಟ್ ಗೇಟ್ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಆಗ ಡ್ಯಾಂನಿಂದ ಇನ್ನಷ್ಟು ನೀರು ನದಿಗೆ ಬಿಡುವ ಸಾಧ್ಯತೆ ಇದೆ.
ತುಂಬಿದ ತುಂಗಾ ಅಣೆಕಟ್ಟು: ರಾಜ್ಯದ ಅತಿ ಚಿಕ್ಕ ಅಣೆಕಟ್ಟು ತುಂಗಾ ಅಣೆಕಟ್ಟು. ಈ ಅಣೆಕಟ್ಟು ಈಗಾಗಲೇ ತುಂಬಿದೆ. ಅಣೆಕಟ್ಟೆಯ ಒಟ್ಟು ಎತ್ತರ 588.24 ಮೀಟರ್. ಹಾಲಿ ಅಣೆಕಟ್ಟೆಯಲ್ಲಿ 587.54 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟು ತುಂಬಲು ಒಂದು ಅಡಿ ಮಾತ್ರ ಬಾಕಿ ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳ ಹರಿವು ಚೆನ್ನಾಗಿ ಬರ್ತಿದೆ.ಇಂದು ಬೆಳಗ್ಗೆ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಜಾಸ್ತಿ ಆಗುತ್ತಿದ್ದಂತೆಯೇ ಜಲಾಶಯದಲ್ಲಿ ಇರುವ ಬೃಂದಾವನ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಈಗ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದ ಕಾರಣಕ್ಕೆ ನದಿಗೆ ನೀರು ಬಿಡಲಾಗುತ್ತಿದೆ. ನದಿಗೆ ಒಟ್ಟು 2000 ಕ್ಯೂಸೆಕ್ ನೀರು ಬಿಡಲಾಗಿದೆ. ಅಣೆಕಟ್ಟೆಯಲ್ಲಿ 3.24 ಟಿಎಂಸಿ ನೀರು ಸಂಗ್ರಹವಾಗಿದೆ” ಎಂದು ತುಂಗಾ ಮೇಲ್ಡಂಡೆ ಯೋಜನೆಯ ಇಂಜಿನಿಯರ್ ತಿಪ್ಪನಾಯ್ಕ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.