ಮಳೆಯಲ್ಲಿಯೇ ಗ್ರಾಮ ದೇವತೆಗಳ ಹೊನ್ನಾಟ!
ಸುರಿಯುವ ಮಳೆಯಲ್ಲಿಯೇ ದೇವಿಯರ ಹೊನ್ನಾಟ ನಡೆಯುವ ವಿಶೇಷತೆಹೊಂದಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ- ಬಿಳಕಿ ಗ್ರಾಮದೇವಿಯರ ಜಾತ್ರೆ ಈ ಸಲವೂ ಸುರಿಯುವ ಮಳೆಯ ಮಧ್ಯೆಯೇ ಅದ್ದೂರಿಯಾಗಿ ನಡೆಯಿತು. ಪ್ರತಿ ಐದು ವರ್ಷಕ್ಕೊಮ್ಮೆ ಐದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ಎರಡು ದಿನದ ಹೊನ್ನಾಟ ಯಶಸ್ವಿಯಾಗಿ ನಡೆಯುತ್ತಿದೆ.
ಸಾಮಾನ್ಯವಾಗಿ ಗ್ರಾಮದೇವಿಯರ ಜಾತ್ರೆಗಳಲ್ಲಿ ಭಂಡಾರದ ಮಧ್ಯೆ ಹೊನ್ನಾಟ ನಡೆಯೋ ಸಂಪ್ರದಾಯವಿದೆ. ಆದರೆ ಅವರೊಳ್ಳಿ-ಬಿಳಕಿ ದೇವಿಯರ ಜಾತ್ರೆಯಲ್ಲಿ ಭಂಡಾರದ ಜೊತೆಗೆ ಸುರಿಯುವ ಮಳೆಯಲ್ಲಿ ದೇವಿಯರ ಹೊನ್ನಾಟ ನಡೆದಿದೆ. ಎರಡು ದಿನದ ಹೊನ್ನಾಟದ ಬಳಿಕ ದೇವಿಯರನ್ನು ವಿಶೇಷವಾಗಿ ದಂಡ ಯುದ್ಧದ ಮೂಲಕ ಸೀಮೆಗೆ ಕಳುಹಿಸಿಕೊಡಲಾಯಿತು.



