ಇತ್ತೀಚೆಗೆ ಜಯಮ್ ರವಿ (Jayam Ravi) ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು. ನನಗೆ ಈ ವಿಚಾರ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಎಡೆ ಮಾಡಿಕೊಟ್ಟರು. ಈಗ ಫ್ಯಾಮಿಲಿ ಕೋರ್ಟ್ನಲ್ಲಿ ಇಬ್ಬರ ವಿಚ್ಛೇದನಕ್ಕೆ ಶೀಘ್ರವೇ ಅಧಿಕೃತ ಮುದ್ರೆ ಬೀಳಲಿದೆ ಎನ್ನಲಾಗಿದೆ. ಇಷ್ಟೇ ಅಲ್ಲ, ಆರತಿ (Arati Ravi) ಅವರು ಜಯಮ್ ರವಿ ಬಳಿ ತಿಂಗಳಿಗೆ 40 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟ ಬಗ್ಗೆಯೂ ವರದಿ ಆಗಿದೆ. ಈ ವಿಚಾರ ಸಾಕಷ್ಟು ಶಾಕಿಂಗ್ ಎನಿಸಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ವಿಚ್ಛೇದನ ಪಡೆಯುತ್ತಾರೆ ಎಂದಾಗ ಅವರು ಮಾಜಿ ಪತ್ನಿಯರಿಗೆ ಎಷ್ಟು ಜೀವನಾಂಶ ನೀಡಿದರು ಎನ್ನುವ ವಿಚಾರ ಚರ್ಚೆ ಆಗುತ್ತದೆ. ಇತ್ತೀಚೆಗೆ ಕ್ರಿಕೆಟರ್ ಯಜುವೇಂದ್ರ ಚಹಾಲ್ ಬಳಿ ಡ್ಯಾನ್ಸರ್ ಧನಶ್ರೀ ವರ್ಮಾ ಅವರು 4.75 ಕೋಟಿ ರೂಪಾಯಿ ಜೀವನಾಂಶ ಪಡೆದಿದ್ದು ಸುದ್ದಿ ಆಗಿತ್ತು. ಈಗ ಜಯಮ್ ರವಿ ಅವರ ಸರದಿ.
ಮೇ 21ರಂದು ಜಯಮ್ ರವಿ ಹಾಗೂ ಆರತಿ ಚೆನ್ನೈನಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಿ ಹಾಕಿದ್ದಾರೆ. ಮತ್ತೆ ಸಂಬಂಧವನ್ನು ಸರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಪರಸ್ಪರ ವಿಚ್ಛೇದನ ಕೊಡಲು ಇಬ್ಬರೂ ಒಪ್ಪಿದ್ದಾರೆ. ಈ ವೇಳೆ ಆರತಿ ಅವರು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಆರತಿ ಆಗ್ರಹಿಸಿದ್ದಾರೆ. ಅಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿ ಆಗಲಿದೆ.