ಬೆಳಗಾವಿ : ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಬೆಳಗಾವಿ ಖಾಸಬಾಗ ರಾಘವೇಂದ್ರ ಕಾಲೋನಿಯ ಶ್ರೀ ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಶ್ರೀ ಸಾಯಿ ರಾಮ ಮಂದಿರ ಸೇವಾ ಸಂಘದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಾದ ಅಪೇಕ್ಷಾ ವೇರ್ನೆೇಕರ್, ಶ್ರುತಿ ಗೌಡರ, ತನ್ವಿ ಕಾಲಂಗಡಿ, ರಂಜಿತ್ ಅನಗೋಳ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿನಿ ನಿತ್ಯಾ ರಾಯ್ಕರ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಸ್ಪೂರ್ತಿ ತಾಳೂಕರ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಮಂದಿರ ಚೇರ್ಮನ್ ಮಯೂರ ವೇರ್ಣೆಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿಜಯ್ ನೈನಾರ, ಕಾರ್ಯದರ್ಶಿಗಳಾದ ಶ್ರೀಧರ್ ತಿಗಡಿ, ವಿನಾಯಕ ರಾಯ್ಕರ್, ಖಜಾಂಚಿಗಳಾದ ಶ್ರೀಶೈಲ್ ಮದ್ಲಿ , ನೀಲಕಂಠ ಶೆಟ್ಟಿ ಹಾಗೂ ಸದಸ್ಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪಾಲಕರು, ಸಾಯಿ ಮಂದಿರ ಭಕ್ತರು ಉಪಸ್ಥಿತರಿದ್ದರು