ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ “ಉತ್ತಮ ವಿದ್ಯಾರ್ಥಿ ಗ್ರಾಮ ಪುರಸ್ಕಾರ”
ಚಿಕ್ಕೋಡಿ-“ಅಚಲವಾದ ಗುರಿ, ಯೋಜನಾ ಬದ್ಧ ಅಧ್ಯಯನದಿಂದ ಅಂದುಕೊಂಡ ಗುರಿ ಸಾಧಿಸಲು ಸಾಧ್ಯ ಎಂಬುವುದನ್ನು ನಾಗರಮುನ್ನೋಳಿಯ ಸರ್ಕಾರಿ ಪ್ರೌಢ ಶಾಲೆಯ 2024-25ನೇ ಸಾಲಿನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದು ಹೆಮ್ಮೆಯ ಸಂಗತಿಯಾಗಿದೆ” ಎಂದು ಗ್ರಾಮದ ಮುಖಂಡ ಸಿದ್ದಪ್ಪ ಮರ್ಯಾಯಿ ಹೇಳಿದರು.
ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯ ಸಭಾಭವನದಲ್ಲಿ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ “ಉತ್ತಮ ವಿದ್ಯಾರ್ಥಿ ಗ್ರಾಮ ಪುರಸ್ಕಾರ” ಪ್ರಶಸ್ತಿ ನೀಡಿ ಸನ್ಮಾನಿಸಿ ಮಾತನಾಡುತ್ತಾ, “ನಾಗರಮುನ್ನೋಳಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಹೆಚ್ಚಿನ ಅಂಕಗಳನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫಲಿತಾಂಶವನ್ನು ಶಾಲೆಯು ಪಡೆಯುವಂತಾಗಲಿ ಎಂದು ಹಾರೈಸಿದಿರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಾ ಬಾನೆ ಮಾತನಾಡಿ, “ಬಾಲಕಿಯರು ಹೆಚ್ಚು ಅಂಕಗಳನ್ನು ಪಡೆದು ಶಾಲೆಗೂ, ಗ್ರಾಮಕ್ಕೂ, ಪಾಲಕರಿಗೂ ಹೆಸರು ಕೀರ್ತಿ ತಂದಿದ್ದು ಖುಷಿಯಾಗಿದೆ. ಮುಂದಿನ ವರ್ಷದಲ್ಲಿ ಬಾಲಕಿಯರೊಂದಿಗೆ ಬಾಲಕರೂ ಕೂಡ ಇಂತಹ ಸಾಧನೆ ಮಾಡಲಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವತಿಯಿಂದ 2024-25ನೇ ಸಾಲಿನ “ಉತ್ತಮ ವಿದ್ಯಾರ್ಥಿ ಗ್ರಾಮ ಪುರಸ್ಕಾರ” ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾ ಕುಂಬಾರ, ಸ್ನೇಹಾ ಚೌಗಲಾ, ಶೃತಿ ಕಿಲ್ಲೇದಾರ, ಕಾವೇರಿ ಕುಂಬಾರ ಹಾಗೂ ಐಶ್ವರ್ಯಾ ಮುನ್ನೋಳಿ ಅವರಿಗೆ ವೇದಿಕೆಯ ಮೇಲಿದ್ದ ಗಣ್ಯರು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ರಾಜು ಕುಂಬಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮಾ ಮುಲ್ತಾನಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂ ಕೆ ಖೋತ, ಶಂಖರ ನೇರ್ಲಿ, ಬಾಬಾಸಾಹೇಬ ಕಾಳನ್ನವರ, ಮಲ್ಲಪ್ಪ ಟೊಣಪೆ, ಎಂ.ಬಿ.ಆಲೂರೆ, ಸಂಜೀವ ಡೋಣವಾಡೆ, ವಿಶ್ವನಾಥ ನೇರ್ಲಿ, ಕಮತೆ, ರಘು ಬಡಿಗೇರ ಮುಂತಾದವರು ಭಾಗವಹಿಸಿದ್ದರು.
Laxmi News 24×7