ಕ್ಯಾಂಪ್ ಧೋಬಿ ಘಾಟ್ ಕೆರೆಯ ಪುನರುಜ್ಜೀವನ…
ದಂಡು ಮಂಡಳಿಗೆ ಹಸ್ತಾಂತರಿಸಿ ಪ್ರಶಂಸೆಗೆ ಪಾತ್ರವಾದ “ಪ್ಯಾಸ್ ಫೌಂಡೇಶನ್”
ಬೆಳಗಾವಿಯ ಕ್ಯಾಂಪ್ ಧೋಬಿ ಘಾಟ್’ನಲ್ಲಿ ಪುನರುಜ್ಜೀವನಗೊಳಿಸಿದ ಕೆರೆಯನ್ನು ಪ್ಯಾಸ್ ಫೌಂಡೇಶನ ದಂಡು ಮಂಡಳಿಗೆ ಹಸ್ತಾಂತರಿಸಿತು. ಮುಖ್ಯ ಅತಿಥಿಗಳಾಗಿ ಎಂ.ಎಲ್.ಐ.ಆರ್.ಸಿಯ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ, ಗೌರವ ಅತಿಥಿಗಳಾಗಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಕುಮಾರ್ ಸ್ನೇಹಂ ಟ್ಯಾಪಿಂಗ್ ಸೊಲ್ಯೂಷನ್’ನ ಸಿ.ಎಸ್.ಆರ್. ಸುನೀಶ್ ಮೇತ್ರಾಣಿ ಉಪಸ್ಥಿತರಿದ್ಧರು.
ಸುಮಾರು ಒಂದುವರೆ ಎಕರೆಯಲ್ಲಿರುವ ಈ ಕೆರೆಯನ್ನು ಸ್ನೇಹಂ ಟ್ಯಾಪಿಂಗ್ ಸೊಲ್ಯುಷನ್’ನ ಸಹಕಾರ್ಯದಿಂದ ಪ್ಯಾಸ್ ಫೌಂಡೇಶನ ಈ ಕೆರೆಯನ್ನು ಪುನರುಜ್ಜೀವನಗೊಳಿಸಿದೆ. ಇದರ ಮಧ್ಯಭಾಗದಲ್ಲಿ ಒಂದು ದ್ವೀಪವನ್ನು ನಿರ್ಮಿಸಿ. ಸಸಿಗಳನ್ನು ನೆಡಲಾಗಿದೆ. ಇದರಿಂದಾಗಿ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಸಹಾಯವಾಗಲಿದೆ. 4 ಬಾವಿಗಳು ಮತ್ತು 14 ಕೆರೆಗಳನ್ನು ಪ್ಯಾಸ್ ಫೌಂಡೇಶನ ಪುನರುಜ್ಜೀವನಗೊಳಿಸಿದೆ ಎಂದು ಪ್ಯಾಸ್ ಫೌಂಡೇಶನ ಅಧ್ಯಕ್ಷರಾದ ಡಾ.ಮಾಧವ್ ಪ್ರಭು ತಿಳಿಸಿದರು.
ನೀರು ಉಳಿಸಿ, ಕೊಯ್ಲು ಮಾಡಿ ಎಂಬುದು ಪ್ಯಾಸ್ ಫೌಂಡೇಶನ್’ನ ಪ್ರಮುಖ ಧ್ಯೇಯವಾಗಿದೆ. ಕ್ಯಾಂಪ್’ನ ಧೋಬಿ ಘಾಟ್’ನಲ್ಲಿ ಮಾನವ ನಿರ್ಮಿತ ಕೆರೆಯಾಗಿದೆ. ಬೆಳಗಾವಿಗರ ನೀರಿನ ಮಹತ್ವವನ್ನು ತಿಳಿದುಕೊಳ್ಳುವುದು ಅತ್ಯಾವಶ್ಯವಾಗಿದೆ. ಜಲಸಂಪನ್ಮೂಲಗಳ ಸದ್ಭಳಕೆಗೆ ಎಲ್ಲರೂ ಕೈಜೋಡಿಸಬೇಕೆಂದರು.
ಅದೇ ರೀತಿ ಪ್ಯಾಸ್ ಫೌಂಡೇಶನ್’ನ ಈ ಕಾರ್ಯವನ್ನು ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಅವರು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಡಾ. ಪ್ರೀತಿ ಕೋರೆ, ಅಭಿಮನ್ಯೂ ದಾಗಾ, ಲಕ್ಷ್ಮೀಕಾಂತ್ ಪಸಾರಿ, ರೋಹನ್ ಕುಲಕರ್ಣಿ, ಅವಧೂತ್ ಸಾಮಂತ್, ಸೂರ್ಯಕಾಂತ್ ಹಿಂಡಲಗೇಕರ್, ಸತೀಶ್ ಲಾಡ್, ನೀತಿನ್ ಖೋತ್, ಸತೀಶ್ ಮಣ್ಣೂರಕರ, ಪುರಂದರ, ಸತೀಶ್ ಲಾಡ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7