Breaking News

ಮಳೆಯ ಆವಾಂತರದಿಂದ ಬೀದಿ ಪಾಲಾದ ಕುಟುಂಬ

Spread the love

ಮಳೆಯ ಆವಾಂತರದಿಂದ ಬೀದಿ ಪಾಲಾದ ಕುಟುಂಬ

ರಾಯಬಾಗ: ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು ಶೀತಲಗೊಂಡಿದ್ದು, ಕಡು ಬಡತನದ ಕುಟುಂಬವೊಂದು ಬೀದಿ ಪಾಲಾದ ಘಟನೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸಾಮನೆ ತೋಟದಲ್ಲಿ ಸಂಭವಿಸಿದೆ.

 


ಹಿಡಕಲ್ ಗ್ರಾಮದ ನಿವಾಸಿ ಪ್ರವೀಣ ಮಾಂಗ ಎಂಬುವವರು ತಮ್ಮ 6 ಗುಂಟೆ ಭೂಮಿಯಲ್ಲಿ ಸರಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಕೊಂಡು ಹೆಂಡತಿ ಹಾಗು ಇಬ್ಬರು ಮಕ್ಕಳೋಡನೆ ಜೀವನ ಸಾಗಿಸುತಿದ್ದರು. ಆದರೆ ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು

ಶೀತಲಗೊಂಡಿದ್ದು, ಬದುಕು ಬೀದೀಪಾಲಾಗಿದೆ. ಮಕ್ಕಳ ಪುಸ್ತಕ ಹಾಗು ಮನೆಯಲ್ಲಿ ಸಂಗ್ರಹಿಸಿದ್ದ 10 ಕ್ವಿಂಟಲ್ ದವಸ ದಾನ್ಯಗಳು ಮಳೆಯಲ್ಲಿ ತೊಯ್ದು ಹೋಗಿದ್ದು ಪಕ್ಕದ ಮನೆಯಲ್ಲಿ ಶೇಖರಣೆ ಮಾಡಿ ಇಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇಲ್ಲಿಯವರೆಗೆ ಈ ರೀತಿ ಘಟನೆಗಳಿಗೆ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಬೇಕಿದ್ರೆ ಒಂದು ಫೋಟೋ ತಗೊಂಡು ಹೋಗುತ್ತೇವೆ.

ಅಬ್ಬಬಾ ಅಂದ್ರೆ 25 ಸಾವಿರ ಪರಿಹಾರ ಸಿಗಬಹುದು ಅದರರ್ಧ ನೀನು ನಮಗೆ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿರುವುದು ಖಂಡನೀಯ. ಸ್ಥಳೀಯ ಆಡಳಿತ ಮಂಡಳಿ ಹಾಗು ರಾಯಬಾಗ ತಹಸೀಲ್ದಾರ್ ಅವರು ಈ ನಿರಾಶ್ರಿತ ಕುಟುಂಬಕ್ಕೆ ಆಶ್ರಯ ನೀಡಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.


Spread the love

About Laxminews 24x7

Check Also

ಕೊಪ್ಪಳದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್​ನಲ್ಲಿ ಹಸುಗೂಸು ರವಾನೆ

Spread the loveಕೊಪ್ಪಳ: ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹಸುಗೂಸನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್​ನಲ್ಲಿ ಹುಬ್ಬಳ್ಳಿ ಕಿಮ್ಸ್​ಗೆ ಕರೆದೊಯ್ಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ