Breaking News

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ
ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ
ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ
ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ
ಪಿಂಕ್ ವಾರಿಯರ್ಸ್ ತಂಡದ ಕಾರ್ಯವನ್ನು ಶ್ಲಾಘಿಸಿದ ವಿಜಯ್ ಮೋರೆ
ಪಿಂಕ್ ವಾರಿಯರ್ಸ್ ಕಾರ್ಯಕ್ಕೆ ಬೆಂಬಲ ಸೂಚಿಸಿದ ವಿಜಯ್ ಪಾಟೀಲ್
ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಮುಂಜಾಗೃತೆ ಕುರಿತು ಅಪರ್ಣಾ ಖಾನೋಲಕರ ಅವರ ನೇತೃತ್ವದ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕವನ್ನು ಸಾದರಪಡಿಸಲಾಯಿತು.
ಸ್ತನ ಕ್ಯಾನ್ಸರ್’ನಿಂದ ಪೀಡಿತ ಜನರ ಮನೋಬಲವನ್ನು ಹೆಚ್ಚಿಸುವ ಕೆಲಸವನ್ನು ಅಪರ್ಣಾ ಖಾನೋಲಕರ ಮತ್ತು ಅವರ ತಂಡವು ಮಾಡುತ್ತಿದೆ. ಇವರ ಈ ತಂಡವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷರಾದ ವಿಜಯ್ ಮೋರೆ ಅವರು ಸತ್ಕರಿಸಿರಿ ಪ್ರೋತ್ಸಾಹಿಸಿದರು. ಸ್ತನ ಕ್ಯಾನ್ಸರ್ ರೋಗದಿಂದ ಮುಂಜಾಗೃತೆ ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿರುವ ಪಿಂಕ್ ವಾರಿಯರ್ಸ್ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.
ವೃದ್ಧಾಶ್ರಮದ ಅಧ್ಯಕ್ಷರಾದ ವಿಜಯ ಪಾಟೀಲ್ ಅವರು ಪಿಂಕ್ ವಾರಿಯರ್ಸ್’ಗಳ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸ್ತನ ಕ್ಯಾನ್ಸರ್ ನಿವಾರಣೆಗೆ ಶ್ರಮಿಸುತ್ತಿರುವ ವೈದ್ಯರು ಮತ್ತು ತಂಡದ ಸನ್ಮಾನವನ್ನು ಆಯೋಜಿಸಲಾಗುವುದು ಎಂದರು. ಅಲ್ಲದೇ, ಪಿಂಕ್ ವಾರಿಯರ್ಸ್ ತಂಡದ ಕಾರ್ಯಕ್ಕೆ ತಮ್ಮ ಸಹಕಾರ್ಯ ಸದಾ ಇರಲಿದೆ ಎಂದರು.

Spread the love

About Laxminews 24x7

Check Also

ಕೊಪ್ಪಳದಿಂದ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್​ನಲ್ಲಿ ಹಸುಗೂಸು ರವಾನೆ

Spread the loveಕೊಪ್ಪಳ: ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹಸುಗೂಸನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್​ನಲ್ಲಿ ಹುಬ್ಬಳ್ಳಿ ಕಿಮ್ಸ್​ಗೆ ಕರೆದೊಯ್ಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ