ತುಮಕೂರು ಸಿದ್ಧಗಂಗಾ ಶ್ರೀಗಳ 118ನೇ ಜಯಂತಿ; ಗುರುವಂದನಾ ಕಾರ್ಯಕ್ರಮ
ಶಿವಕುಮಾರ ಸ್ವಾಮೀಗಳು ನಡೆದಾಡಿದ ಭೂಮಿ ನಿಜಕ್ಕೂ ಆಧ್ಯಾತ್ಮಭರಿತ; ರಕ್ಷಣಾ ಸಚಿವ ರಾಜನಾಥ್ ಸಿಂಗ್…
ಶಾಲೆಗಳಲ್ಲಿ ಬಿಸಿಯೂಟಕ್ಕೆ ಸಿದ್ಧಗಂಗಾಮಠವೇ ಪ್ರೇರಣೆ; ಡಿಸಿಎಂ ಡಿ.ಕೆ.ಶಿವಕುಮಾರ್
ಸಿದ್ಧಗಂಗಾ ಶ್ರೀಗಳು ಕೇವಲ ಶಿಕ್ಷಣ ಮತ್ತು ದಾಸೋಹಕ್ಕೆ ಪ್ರಾಧಾನ್ಯತೆಯನ್ನು ನೀಡದೇ, ಉಚ್ಛ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕವು ಎಲ್ಲ ಕ್ಷೇತ್ರದಲ್ಲಿಯೂ ಖ್ಯಾತಿಯನ್ನು ಹೊಂದಿರುವ ರಾಜ್ಯವಾಗಿದ್ದು, ಭವಿಷ್ಯದಲ್ಲಿಯೂ ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.
ನಡೆದಾಡುವ ದೇವರು ತುಮಕೂರು ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮಿಜೀಗಳ 118ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ಶ್ರೀ ಶಿವಕುಮಾರ ಸ್ವಾಮೀಗಳು ಇಂದು ನಮ್ಮೊಂದಿಗಿಲ್ಲ. ಆದರೇ, ಅವರ ತತ್ವಾದರ್ಶಗಳು ಇಂದಿಗೂ ನಮ್ಮೊಂದಿಗಿವೆ. ಈ ಭೂಮಿಗೆ ಕಾಲಿಡುತ್ತಲೇ ಆಧ್ಯಾತ್ಮಕತೆಯ ಅನುಭೂತಿಯಾಗುತ್ತದೆ.
ಸಿದ್ಧಗಂಗಾ ಶ್ರೀಗಳು ಕೇವಲ ಶಿಕ್ಷಣ ಮತ್ತು ದಾಸೋಹಕ್ಕೆ ಪ್ರಾಧಾನ್ಯತೆಯನ್ನು ನೀಡದೇ, ಉಚ್ಛ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ. ಕರ್ನಾಟಕವು ಎಲ್ಲ ಕ್ಷೇತ್ರದಲ್ಲಿಯೂ ಖ್ಯಾತಿಯನ್ನು ಹೊಂದಿರುವ ರಾಜ್ಯವಾಗಿದ್ದು, ಭವಿಷ್ಯದಲ್ಲಿಯೂ ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿರಲಿದೆ ಎಂದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಮ್ಮನ ನೆನಪು ಪ್ರೀತಿಯ ಮೂಲ. ಗುರುವಿನ ನೆನಪು ಜ್ಞಾನದ ಮೂಲ. ದೇವರ ನೆನಪು ಭಕ್ತಿಯ ಮೂಲ. ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ ಎಂದು ಹೇಳಿ, ಮೋಕ್ಷಕ್ಕೆ ಸೇರಬೇಕೆಂದರೇ ಸಿದ್ಧಗಂಗಾ ಶ್ರೀಗಳ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ಇಂತಹ ಮಹಾನ್ ಚೇತನರ ಹೆಸರನ್ನು ನನ್ನ ತಂದೆತಾಯಿಯರು ನನಗಿಟ್ಟಿದ್ದು, ಕೂಡ ನನ್ನ ಭಾಗ್ಯ ಎಂದರು. ಇಡೀ ರಾಜ್ಯಕ್ಕೆ ಸರ್ಕಾರದಿಂದ ಬಿಸಿಯೂಟದ ಮೂಲಕ ಅನ್ನದಾಸೋಹ ಆರಂಭಿಸಲು ಈ ಮಠವೇ ಸ್ಫೂರ್ತಿ ಎಂದರು. ಅಲ್ಲದೇ, ಕನ್ನಡ ನಾಡಿನ ಪರವಾಗಿ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೂಲಕ ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದರು.
ಸುತ್ತೂರಿನ ಜಗದ್ಗುರುಗಳಾದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಲಿಂಗ ಮಹಾಸ್ವಾಮೀಜಿಗಳು ವಹಿಸಿದ್ದರು. ಉತ್ತರಾಧಿಕಾರಿಗಳಾದ ಶಿವಸಿದ್ಧೇಶ್ವರ ಸ್ವಾಮೀಜಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
Laxmi News 24×7