Breaking News

ಹೊರಗಿನ‌ ಕೆಲಸಕ್ಕೆ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಬಳಕೆ ಜಮಖಂಡಿ ಜೈಲು ಅಧಿಕಾರಿಗಳಿಂದ ಕರ್ತವ್ಯ ಲೋಪ.?

Spread the love

ಹೊರಗಿನ‌ ಕೆಲಸಕ್ಕೆ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಬಳಕೆ
ಜಮಖಂಡಿ ಜೈಲು ಅಧಿಕಾರಿಗಳಿಂದ ಕರ್ತವ್ಯ ಲೋಪ.?
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿರುವ ಜೈಲಿನ ವಿಚಾರಣಾ ಧೀನ ಕೈದಿಗಳನ್ನು ಜೈಲರ್ ಹಾಗೂ ಸಿಬ್ಬಂದಿಗಳೇ ಹೊರಗಡೆ ಕರೆದುಕೊಂಡು ಹೋಗಿ ಕೆಲಸಕ್ಕಾಗಿ ಬಳಸಿಕೊಂಡು ಕರ್ತವ್ಯ ಲೋಪ ಎಸಗಿರುವ ಘಟನೆ ಸಾರ್ವಜನಿಕರನ್ನು ಹುಬ್ಬೇರಿಸುವಂತೆ ಮಾಡಿದೆ
ಅವರು ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಗಳಾದ ಈರಪ್ಪ ಪುನಾಣೆ,ನಾಗಪ್ಪ ಪುನಾಣೆ ಎಂಬ ಆರೋಪಿಗಳು ಇವರನ್ನು ಸ್ವತಹ ಜೈಲರ್ ಮತ್ತು ಸಿಬ್ಬಂದಿಗಳು ಜೈಲು ಕೊಠಡಿಗಳಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ.
ಪೈಪ್ ಲೈನ್ ರಿಪೇರಿ ಕೆಲಸ, ಅರಣ್ಯ ಜಾಗದಲ್ಲಿ ಕಲ್ಲು ಮಣ್ಣು ತುಂಬುವುದು ಹಾಗೂ ವಿಜಯಪುರ ಬೆಳಗಾವಿ ರಾಜ್ಯ ಹೆದ್ದಾರಿಯ ಸೇತುವೆ ಕೆಳಗಿನ ಕೆಲಸಕ್ಕೆ ಇವರನ್ನು ಬೇರೆ ಕಾರ್ಮಿಕರ ಬದಲಾಗಿ ಬಳಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಈ ಕೈದಿಗಳು ಬಿಂದಾಸ್ ಆಗಿ ಓಡಾಡುತ್ತಿರುವಾಗ ಜೈಲು ಅಧಿಕಾರಿಗಳು ಕೈ ಕಟ್ಟಿಕೊಂಡು ನಿಂತಿದ್ದಾರೆ.
ಅವರು ತಪ್ಪಿಸಿಕೊಂಡು ಹೋದರೆ ಅಥವಾ ಅವರಿಗೆ ಏನಾದರೂ ಆದರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಮೂಡುತ್ತದೆ.
ಅದೇನೇ ಇರಲಿ ಕೈದಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾನೂನು ಒಂದು ಕಡೆಯಾದರೆ ಅದೇ ಕೈದಿಗಳನ್ನ ಹೊರಗಡೆ ತಂದು ಕೆಲಸಕ್ಕಾಗಿ ಬಳಸಿಕೊಳ್ಳುತ್ತಿರುವುದು ಜೈಲು ಆಡಳಿತದ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ

Spread the love

About Laxminews 24x7

Check Also

25 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಸರಗೋಡಿನ ಬಾಲಕಿ, ನೆರೆಮನೆ ವ್ಯಕ್ತಿ ಶವವಾಗಿ ಪತ್ತೆ

Spread the loveಸುಳ್ಯ/ಕಾಸರಗೋಡು: ಕಳೆದ ಫೆ.12ರಂದು ಕಾಸರಗೋಡಿನ ಪೈವಳಿಗಾದಿಂದ ನಾಪತ್ತೆಯಾಗಿದ್ದ ಬಾಲಕಿ ಹಾಗೂ ನೆರೆಮನೆಯ ವ್ಯಕ್ತಿ ನೇಣು ಬಿಗಿದುಕೊಂಡ ರೀತಿಯಲ್ಲಿ ಶವವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ