ಶಿವಮೊಗ್ಗ ಪ್ರವೇಶಕ್ಕೆ ಡಿಸಿ ಹಾಗೂ ಎಸ್ಪಿ ಹಾಕಿದ್ದ ನಿರ್ಬಂಧವನ್ನು ನ್ಯಾಯಾಲಯವು ತೆರವುಗೊಳಿಸಿದ್ದು, ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗಕ್ಕೆ ಪ್ರವೇಶ ದೊರೆತಂತಾಗಿದೆ. ಇನ್ನು ನಿರ್ಬಂಧ ಹೇರಿದ ಡಿ.ಸಿ. ಮತ್ತು ಎಸ್ಪಿ ಅವರ ನೀತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರಕ್ಕೆ ಪ್ರವೇಶ ನಿರ್ಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಛೀಮಾರಿ ಹಾಕಿದರು. ರಾಜ್ಯದಲ್ಲಿ ನಡೆಯುತ್ತಿರುವ ಲವ್ ಜಿಹಾದ್’ಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಪುಸ್ತಕ ಬಿಡುಗಡೆಗೆ ಬರಲು ನಿರ್ಬಂಧಿಸಿದ ಡಿಸಿ-ಎಸ್ಪಿ ಉದ್ಧಟತನ ಮೆರೆದಿದ್ದರು. ಆದರೇ ನ್ಯಾಯಾಲಯ ನ್ಯಾಯವನ್ನು ನೀಡಿದೆ. ಲವ್ ಜಿಹಾದ್ ಪುಸ್ತಕ ಇದು ಹಿಂದೂ ಯುವತಿಯರ ಸುರಕ್ಷತೆಯ ಪುಸ್ತಕವಾಗಿದೆ. ತಪ್ಪು ಹೇಳಿಕೆ ನೀಡಿದರೇ ಕೇಸ್ ದಾಖಲಿಸಿ, ಆದರೇ ವಿಚಾರವನ್ನೇ ಹೇಳಲು ತಡೆಯೊಡ್ಡಿದರೇ ಬಹಳ ದೊಡ್ಡ ಅನಾಹುತವಾಗಲಿದೆ ಎಂದರು.
’
ಇನ್ನು ಮಹಾರಾಷ್ಟ್ರದ ಎನ್.ಸಿ.ಪಿ. ಶಾಸಕ ಅಬು ಅಝ್ಮಿ ಅವರು ಔರಂಗಜೇಬ್ ಒಳ್ಳೆಯವನಾಗಿದ್ದ, ಆತ ದೇವಸ್ಥಾನಗಳನ್ನು ಧ್ವಂಸಗೊಳಿಸಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕೇವಲ ಕೇಸ್ ದಾಖಲಿಸಿದರೇ ಸಾಲದು, ಒದ್ದು ಒಳಗಡೆ ಹಾಕಬೇಕು. ಅಬು ಅಜ್ಮಿ ಓರ್ವ ದೇಶದ್ರೋಹಿ. ಆತನಿಗೂ ಕ್ರೂರವಾದ ಹಿಂಸೆ ಕೊಡಬೇಕು ಎಂದರು.