ಹುಕ್ಕೇರಿ : ಹಿಡಕಲ್ ಜಲಾಶಯದ ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಚಾಲನೆ
ಹುಕ್ಕೇರಿ ತಾಲೂಕಿನ ಜೀವನಾಡಿ ರಾಜಾ ಲಖಮಗೌಡ ಜಲಾಶಯದ ನೀರನ್ನು ಹುಬ್ಬಳ್ಳಿ ಧಾರವಾಡಕ್ಕೆ ಕೈಗಾರಿಕಾ ಉದ್ದೇಶಕ್ಕೆ ಸರಬರಾಜು ಮಾಡುವ ಪ್ರಕ್ರೀಯೆ ಯನ್ನು ಬಂದ ಮಾಡುವಂತೆ ಆಗ್ರಹಿಸಿ ಇಂದು ಹುಕ್ಕೇರಿ ನಗರದಲ್ಲಿ ವಿವಿಧ ಮಠಾಧೀಶರು, ನೀರು ಬಳಕೆ ಸಂಘದ ಸದಸ್ಯರು ಮತ್ತು ರೈತ ಸಂಘಟನೆಯ ಮುಖಂಡರು ನಮ್ಮ ನೀರು ನಮ್ಮ ಹಕ್ಕು ಎಂದು ಘೋಷನೆ ಕೂಗಿ ಪ್ರತಿಭಟನೆ ಜರುಗಿಸಿ ತಹಸಿಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ಕೋರ್ಟ ಸರ್ಕಲ್ ಬಳಿ ಜಮಾಯಿಸಿದ ಮಠಾಧೀಶರು ಮತ್ತು ರೈತರು ಸರ್ಕಾರದ ಧೋರಣೆಯನ್ನು ಖಂಡಿಸಿ ಯಾವದೇ ಸಂದರ್ಭದಲ್ಲಿ ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಹೋಗಲು ಬಿಡುವದಿಲ್ಲಾ ಎಂದು ಒಮ್ಮತದಿಂದ ಹೋರಾಟಕ್ಕೆ ಸಿದ್ದರಾದರು.
ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಶಶಿಕಾಂತ ನಾಯಿಕ ಬೆಳಗಾವಿ ಜಿಲ್ಲೆಯ ನೀರು ಬೇರೆ ಜಿಲ್ಲೆಗೆ ಹೋಗುತ್ತಿದೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಈ ಭಾಗದ ಜನರ ಆಶಿರ್ವಾದದಿಂದ ಅಧಿಕಾರ ಪಡೆದು ಸರ್ಕಾರದ ಒಂದು ಭಾಗವಾಗಿದ್ದಾರೆ , ಈ ಭಾಗದ ರೈತರಿಗೆ ,ದನಕರುಗಳಿಗೆ ವರದಾನವಾದ ನೀರು ಬೇರೆ ಕಡೆ ಹೋಗುತ್ತಿರುವದನ್ನು ಸಚಿವರು ಕೈ ಬಿಡಬೇಕು , ಅವರು ಕೂಡಲೆ ಈ ಭಾಗದ ಶಾಸಕರನ್ನು ಮತ್ತು ರೈತ ಮುಖಂಡರನ್ನು ಕರೆದು ಸಭೆ ಜರುಗಿಸಿ ಅನ್ಯಾಯವನ್ನು ಸರಿದೂಗಿಸ ಬೇಕು ಎಂದು ಆಗ್ರಹಿಸಿದರು.
ಸ್ವಾಮಿಜಿಗಳು ,ರೈತರು ಕೋರ್ಟ ಸರ್ಕಲ್ ಹತ್ತಿರ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕ ಸಭೆ ಜರುಗಿಸಿ ಒಕ್ಕೂರಿಲಿನಿಂದ ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ನಮ್ಮ ನೀರು ನಮ್ಮ ಹಕ್ಕು ಸಂಚಸಲಕ ,ರೈತ ಮುಖಂಡ ದುಂಡನಗೌಡ ಪಾಟೀಲ ಮಾತನಾಡಿ ಈ ಭಾಗದ ಶಾಸಕರಿಗೆ ಮತ್ತು ಸಚಿವರಿಗೆ ಗೋತ್ತಿಲ್ಲದೆ ಹಿಡಕಲ್ ಜಲಾಶಯದ ನೀರು ಬೇರೆ ಜಿಲ್ಲೆಗೆ ಹೋಗುತ್ತಿರುವದುಪ್ರತಭಟನೆಕರ ಸಂಗತಿ,
ಈ ಭಾಗದಲ್ಲಿ ಇನ್ನೂ ಸಮಗ್ರ ನೀರಾವರಿ ಯಾಗಿಲ್ಲಾ ಕಾರಣ ಈ ಯೋಜನೆ ಕೈ ಬೀಡಬೇಕು ಇಲ್ಲವಾದರೆ ಬರುವ ದಿನಗಳಲ್ಲಿ ಸಂಕೇಶ್ವರದಿಂದ ಹಿಡಕಲ್ ಜಲಾಶಯದ ವರಗೆ ಪ್ರತಭಟನಾ ರ್ಯಾಲಿ ನಡೆಸಿ ಈ ಯೋಜನೆ ಕೈ ಬಿಡುವ ಆದೇಶ ಬರುವ ವರೆಗೆ ಉಗ್ರವಾದ ಹೋರಾಟ ಮಾಡಲಾಗುವದು ಎಂದರು
ನಂತರ ಹೋರಾಟಗಾರು ಪ್ರತಿಭಟನೆ ಜರುಗಿಸಿ ತಹಸಿಲ್ದಾರ ಮುಖಾಂತರ ಮನವಿ ಸಲ್ಲಿಸಿದರು. ವೇದಿಕೆ ಮೇಲೆ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮಿಗಳು,ಘೋಡಗೇರಿಯ ಕಾಶಿನಾಥ
ಸ್ವಾಮಿಗಳು,ಕ್ಯಾರಗುಡ್ಡದ ಮಂಜುನಾಥ ಮಹಾರಾಜರು, ಶಿವಾಪೂರ ಶ್ರೀಗಳು ಸೇರಿದಂತೆ ರೈತ ಮುಖಂಡರಾದ ಗೋಪಾಲ ಮರಬಸನ್ನವರ, ನ್ಯಾಯವಾದಿ ರಾಮಚಂದ್ರ ಜೋಶಿ, ಎ ಕೆ ಪಾಟೀಲ, ಗಂಗಾಧರ ಪಾಟೀಲ , ಜಿಜಾವುಲ್ಲಾ ವಂಟಮೂರಿ, ತಮ್ಮಣ್ಣಾ ಪಾಟೀಲ, ಚಂದ್ರು ಗಂಡ್ರೋಳಿ, ಸುಭಾಷ ನಾಯಿಕ, ಭೀಮಗೌಡ ಪಾಟೀಲ, ಚಂದು ಗಂಗಣ್ಣವರ, ಬಸವ ಪ್ರಭು ವಂಟಮೂರಿ, ಚಂದ್ರಶೇಖರ ಪಾಟೀಲ, ವಿಜಯ ಸುತಗಟ್ಟಿ, ಮೊದಲಾದವರು ಉಪಸ್ಥಿತರಿದ್ದರು.