ಗದಗ, ಫೆಬ್ರವರಿ 12: ಆತ ಬಡ್ಡಿ ಬಕಾಸುರ, ಅಕ್ರಮವಾಗಿ ಬಡ್ಡಿ ದಂಧೆ (meter interest) ಮಾಡುತ್ತಿದ್ದ. ಕೋಟಿ ಕೋಟಿ ಲೆಕ್ಕದಲ್ಲಿ ಬಡ್ಡಿದಂದೆ ಮಾಡ್ತಾಯಿದ್ದ. ಬಡ ಜನರ ರಕ್ತ ಹೀರಿ ಹೀರಿ ಕುಬೇರನಾಗಿದ್ದ. ಆದರೆ ಬಡ್ಡಿ ಬಕಾಸುರನ ಖಜಾನೆಯನ್ನು ಪೊಲೀಸರು ಜಾಲಾಡಿದ್ದಾರೆ. ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ರೂ. ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ರೂ. ಹಣ ಇಟ್ಟಿದ್ದ. ಆದರೆ ಖಾಕಿ ಪಡೆಯ ಇಂಚಿಂಚು ಶೋಧಕ್ಕೆ ಬಡ್ಡಿ ಬಕಾಸುರ ನೀರು ನೀರು ಅಂತಿದ್ದ. ಪೊಲೀಸರ ಕಾರ್ಯಾಚರಣೆಗೆ ಇಡೀ ಗದಗ ಜಿಲ್ಲೆಯ ಜನರು ಭೇಷ್ ಅಂತಿದ್ದಾರೆ.
ಅಂದಹಾಗೇ ನಿನ್ನೆಯಿಂದ ಪೋಲೀಸರು ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಹೊರಗೆ ನೋಡೋಕೆ ಕಲ್ಲಿನ ಹಳೆಯದಾದ ಮನೆ. ಆ ಮನೆಯಲ್ಲಿ ಯಾರೂ ಇರ್ತಾರೆ ಅಂತ ಅತ್ತ ಯಾರೂ ತಿರುಗಿ ಕೂಡ ನೋಡಲ್ಲ. ಆದರೆ ಇಂದು ಪೊಲೀಸರು ಆ ಮನೆಯ ಬಾಗಿಲು ತೆಗೆದು ಒಳಗೆ ಹೋಗಿ ಫುಲ್ ದಂಗಾಗಿ ಹೋಗಿದ್ದರು. ಹಳೆಯ ಕಟ್ಟಡದಲ್ಲಿ ಅನಂತ ಪದ್ಮನಾಭನ ಖಜಾನೆಯೇ ಪತ್ತೆಯಾಗಿದೆ.ಒಂದೊಂದು ಲಾಕರ್ಗಳು ಓಪನ್ ಮಾಡಿದರೆ 500 ಮುಖ ಬೆಲೆಯ ಕೋಟಿ ಕೋಟಿ ರೂ. ಹಣದ ಕಂತೆಗಳು ಪತ್ತೆಯಾಗಿವೆ. ಇಷ್ಟೊಂದು ಹಣ ಪಾಳು ಮನೆಯಲ್ಲಿ ಇರೋದು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದರು. ಇಷ್ಟಕ್ಕೆಲ್ಲಾ ಕಾರಣ ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಯ ದೊಡ್ಡ ಕುಳ ಯಲ್ಲಪ್ಪ ಮಿಸ್ಕಿನ್
.ಒಂದೊಂದು ಲಾಕರ್ಗಳು ಓಪನ್ ಮಾಡಿದರೆ 500 ಮುಖ ಬೆಲೆಯ ಕೋಟಿ ಕೋಟಿ ರೂ. ಹಣದ ಕಂತೆಗಳು ಪತ್ತೆಯಾಗಿವೆ. ಇಷ್ಟೊಂದು ಹಣ ಪಾಳು ಮನೆಯಲ್ಲಿ ಇರೋದು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದರು. ಇಷ್ಟಕ್ಕೆಲ್ಲಾ ಕಾರಣ ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಯ ದೊಡ್ಡ ಕುಳ ಯಲ್ಲಪ್ಪ ಮಿಸ್ಕಿನ್.
Laxmi News 24×7