ಬೆಳಗಾವಿ : ಗೆಣಸು ತುಂಬಲು ಹೊರಟಿದ್ದ ಕ್ಯಾಂಟರ್ ಒಂದು ರಕ್ಕಸಕೊಪ್ಪ ಜಲಾಶಯದಲ್ಲಿ ಬಿದ್ದಿದೆ. ಚಾಲಕ ಗಾಡಿಯಂದ ಜಿಗಿದು ಹೊರಗೆ ಬಂದಿದ್ದು, ಗಾಡಿ ಮೇಲೆತ್ತುವ ಕಾರ್ಯ ಗುರುವಾರ ಮುಂದುವರಿಯಲಿದೆ.
ಸೋನೋಳಿ ಗ್ರಾಮದ ಮಹೇಶ್ ಜಂಗರುಚೆ ಕ್ಯಾಂಟರ್ ಗಾಡಿ ತೆಗೆದುಕೊಂಡು ರೈತರ ಗೆಣಸು ತುಂಬಲು ಬುಧವಾರ ಸಂಜೆ 5.30ರ ಸುಮಾರಿಗೆ ರಕ್ಕಸಕೊಪ್ಪ ಡ್ಯಾಮ್ ಪಕ್ಕದ ಕಚ್ಚಾ ರಸ್ತೆಯಲ್ಲಿ ಹೋಗುವಾಗ ಕ್ಯಾಂಟರ್ ಗಾಡಿ ಕ್ಲಚ್ ಸಮಸ್ಯೆಯಿಂದ ಒಮ್ಮೆಲೆ ಡ್ಯಾಮ್ ಒಳಗೆ ಹೋಗಿ ನೀರಿನಲ್ಲಿ ಮುಳಗಿತು. ಚಾಲಕ ಮಹೇಶ್ ಜಂಗರುಚಿ ಗಡಿಯಿಂದ ಜಿಗಿದು ಹೊರಗಡೆ ಬಂದಿದ್ದು ಯಾವುದೇ ಪ್ರಾಣ ಹಾನಿ ಆಗಿಲ್ಲ.