ನರಗುಂದ: ತಾಲ್ಲೂಕಿನ ಹದಲಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಹದಲಿ ಗ್ರಾಮದ ದಾವಲಸಾಬ ನರಗುಂದ ಎಂಬ ಆರೋಪಿಯಿಂದ ₹ 5,400 ಮೌಲ್ಯದ 131 ಗ್ರಾಂ ಒಣ ಗಾಂಜಾ ಇರುವ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಹಾಗೂ ₹ 20 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

‘ಅಬಕಾರಿ ಡಿಸಿ ಲಕ್ಷ್ಮಿನಾಯಕ ಅವರ ಮಾರ್ಗದರ್ಶನ ಮತ್ತು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿದ್ದು, ಈಗಾಗಲೇ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ದಾವಲಸಾಬ ನರಗುಂದ ಮತ್ತೆ ಗಾಂಜಾ ಮಾರಾಟ ದಂಧೆಗೆ ಇಳಿದಿದ್ದನು. ನರಗುಂದ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅಬಕಾರಿ ಸಿಪಿಐ ಬಸವರಾಜ ಜಾಮಗೊಂಡ ತಿಳಿಸಿದ್ದಾರೆ.
Laxmi News 24×7