ಚಿಕ್ಕೋಡಿ: ರಾಜ್ಯದ ಕೆಲವೆಡೆ ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ಕಿಡಿಗೇಡಿಗಳು ಪ್ಯಾಲಿಸ್ತೇನ್ ಧ್ವಜ (Palestinian flag) ಹಾರಿಸಿ, ಪ್ಯಾಲಿಸ್ತೇನ್ ಪರ ಘೋಷಣೆ ಕೂಗಿದ್ದರು. ಪಾಕಿಸ್ತಾನ, ಇರಾನ್ ಧ್ವಜವನ್ನೂ ಹಾರಿಸಿದ್ದಾರೆ ಎನ್ನಲಾಗಿತ್ತು. ಇದೀಗ ಪ್ಯಾಲಿಸ್ತೇನ್ ಧ್ವಜ ಹಾರಾಟದ ಕುರಿತಂತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ವಿರೋಧಿ ದೇಶದ ಧ್ವಜ ಹಾರಾಡಿದ್ರೆ ಕ್ರಮ ಕೈಗೊಳ್ಳಬಹುದು. ಆದರೆ ಎಲ್ಲಾ ಮುಸ್ಲಿಂ (Muslim) ಕಂಟ್ರಿಗಳೂ ಭಾರತ ದೇಶದ ವಿರೋಧಿಗಳಲ್ಲ. ಭಾರತದ ಜೊತೆಗೆ ಕೆಲವು ಮುಸ್ಲಿಂ ದೇಶಗಳು ಸ್ನೇಹ ಸಂಬಂಧ ಹೊಂದಿದೆ. ಎಲ್ಲಾ ಒಂದೇ ದೃಷ್ಟಿಯಿಂದ ನೋಡಬಾರದು. ದೇಶ ವಿರೋಧಿ ಚಟುವಟಿಕೆ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ಅದರ ಬಗ್ಗೆ ಪೊಲಿಸ ಇಲಾಖೆ ಕ್ರಮ ಕೈಗೊಳ್ಳುತ್ತದೆ ಅಂತ ಹೇಳಿದ್ದಾರೆ.
ದೇವಾಲಯಗಳು ಸ್ವತಂತ್ರವಾಗಿವೆ
ಮುಜರಾಯಿ ಇಲಾಖೆಯಿಂದ ದೇವಾಲಯಗಳು ಮುಕ್ತವಾಗಬೇಕು ಎಂಬ ಮಂತ್ರಾಲಯ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಅದಕ್ಕೆ ಎಲ್ಲಾ ಉತ್ತರ ಕೊಡುವುದಕ್ಕೆ ಬರುವುದಿಲ್ಲ. ಅದು ಸಾರ್ವಜನಿಕ ವಿಚಾರ, ಸರ್ಕಾರಕ್ಕೆ ಸಂಬಂಧವಿಲ್ಲ. ಎಲ್ಲಾ ದೇವಾಲಯಗಳು ಸ್ವತಂತ್ರವಾಗಿವೆ. ಕೆಲವು ದೇವಾಲಯಗಳು ಮಾತ್ರ ಸರ್ಕಾರದ ಅದಿನದಲ್ಲಿದೆ. ಹಲವು ದೇವಾಲಯಗಳು ಟ್ರಸ್ಟ್ ಮುಖಾಂತರ ನಡೆಯುತ್ತವೆ ಅಂತ ಹೇಳಿದ್ದಾರೆ.
ಗೋಕಾಕ್‌ನಲ್ಲಿ ಕುಳಿತು ತಿರುಪತಿ ಬಗ್ಗೆ ಏನು ಮಾತಾಡೋದು?
ತಿರುಪತಿ ಪ್ರವಾಸದಲ್ಲಿ ದನದ ಕೊಬ್ಬು ಹಾಕಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಗೋಕಾಕ್, ಅಥಣಿಯಲ್ಲಿ ಕುಳಿತು ಏನು ಹೇಳುವುದು? ಅವರು ಜಾಗೃತವಾಗಿ ಇರಬೇಕಿತ್ತು. ನಮಲ್ಲಿ ಇಂತ ಯಾವುದಾದರೂ ಕಂಡು ಬಂದರೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.