ಬೆಂಗಳೂರು : ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಅಂತಾ ತಿಳಿಯುತ್ತಿದ್ದಂತೆ ಶಾಸಕರ ಲಾಬಿ ಹಾಗೂ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೆ ಇದೆ. ಈ ನಡುವೆ ಸಿಎಂ ಗುರುವಾರವೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಿದ್ದಾರೆ.
ನಿನ್ನೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಸಭೆ ನಡೆಸಿದ್ದರು. ಇದರ ಬೆನ್ನಲ್ಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನ ಭರ್ತಿ ಮಾಡಿದ್ದು, ಈ ಮೂಲಕ ಮುಂದೆ ಬರಬಹುದಾಗಿದ್ದ ಅಪರಸ್ವರಕ್ಕೆ ಕಡಿವಾಣ ಹಾಕಿದಂತಾಗಿದೆ. ಈ ಮೂಲಕ ಮುಂದೆ ಬರಬಹುದಾಗಿದ್ದ ಅಪರಸ್ವರಕ್ಕೆ ಕಡಿವಾಣ ಹಾಕಿದಂತಾಗಿದೆ.
ಯಾರಿಗೆ ಯಾವ ಮಂಡಳಿಯ ಅಧ್ಯಕ್ಷ ಸ್ಥಾನ..?
- ತಾರಾ ಅನುರಾಧಗೆ ಅರಣ್ಯ ಅಭಿವೃದ್ಧಿ ನಿಗಮ
- ತಿಪಟೂರಿನ ಶಾಸಕ ಬಿ.ಸಿ.ನಾಗೇಶ್ಗೆ ಕಾರ್ಮಿಕ ಕಲ್ಯಾಣ ಮಂಡಳಿ
- ಶಿರಾ ಕ್ಷೇತ್ರದ ಬಿ.ಕೆ. ಮಂಜುನಾಥ್ಗೆ ನಾರು ಅಭಿವೃದ್ಧಿ ಮಂಡಳಿ
- ಶಿರಾ ಕ್ಷೇತ್ರದ ಎಸ್.ಆರ್.ಗೌಡಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
- ಕೆ.ವಿ. ನಾಗರಾಜ್ಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
- ಸವಿತಾ ವಿಶ್ವನಾಥ್ ಅಮರ್ ಶೆಟ್ಟಿಗೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
- ಚಂದು ಪಾಟೀಲ್ಗೆ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಪಟ್ಟ
- ತಿಪ್ಪೇಸ್ವಾಮಿಗೆ ಕಾಡಾ ನಿಗಮದ ಅಧ್ಯಕ್ಷ ಸ್ಥಾನ
- ಚಿಕ್ಕನಾಯಕನಹಳ್ಳಿಯ ಕಿರಣ್ ಕುಮಾರ್ಗೆ ಜೈವಿಕ ತಂತ್ರಜ್ಞಾನ ನಿಗಮ