Breaking News

308 ಕ್ಕೇರಿದ ಮೃತರ ಸಂಖ್ಯೆ, ಡ್ರೋನ್ ಆಧಾರಿತ ರಾಡಾರ್ ಮೂಲಕ ಪತ್ತೆ ಕಾರ್ಯ

Spread the love

ಯನಾಡ್ : ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 308 ಕ್ಕೆ ತಲುಪಿದೆ. ಇನ್ನೂ 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ತಂಡಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದುವರೆಗೆ ನೂರಾರು ಜನರನ್ನು ರಕ್ಷಿಸಿ ಸುರಕ್ಷಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40 ತಂಡಗಳೊಂದಿಗೆ ಶೋಧ ಕಾರ್ಯಾಚರಣೆ:
ಶುಕ್ರವಾರ ಬೆಳಗ್ಗೆ ಸುಮಾರು 40 ತಂಡಗಳು ಮಂಡಕ್ಕೈ, ಚುರಲ್‌ಮಲಾ, ಅಟ್ಟಮಲ ಮತ್ತು ನೂಲ್‌ಪೂಜಾ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯು 190 ಅಡಿ ಉದ್ದದ ಬೈಲಿ ಸೇತುವೆಯನ್ನು ತ್ವರಿತವಾಗಿ ಪೂರ್ಣಗೊಳಿಸಿತು. ಇದರೊಂದಿಗೆ ರಕ್ಷಣಾ ಕಾರ್ಯಾಚರಣೆ ವೇಗ ಸಿಕ್ಕಿದಂತಾಗಿದೆ. ಈ ಸೇತುವೆಯ ಮೂಲಕ ಭೂಕುಸಿತ ಪ್ರದೇಶಗಳಿಗೆ ಅಗೆಯುವ ಯಂತ್ರಗಳು, ಆಂಬ್ಯುಲೆನ್ಸ್ ಸೇರಿದಂತೆ ಭಾರಿ ಯಂತ್ರಗಳನ್ನು ಸಾಗಿಸಲು ಸಾಧ್ಯವಾಗುತ್ತದೆ. ಚಾಲಿಯಾರ್ ನದಿಯ ಕರಾವಳಿ ಪ್ರದೇಶಗಳಲ್ಲಿನ ದಿಬ್ಬಗಳಲ್ಲಿ ಸಿಲುಕಿರುವ ಮೃತ ದೇಹಗಳನ್ನು ಹೊರತೆಗೆಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಸ್ಥಳೀಯ ಈಜುಗಾರರು ಮೃತದೇಹಗಳಿಗಾಗಿ ನದಿ ದಡದಲ್ಲಿ ಶೋಧ ನಡೆಸಲಿದ್ದಾರೆ. ಇದೇ ವೇಳೆ ಪೊಲೀಸರು ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯ ನಡೆಸಲಿದ್ದಾರೆ ಎನ್ನಲಾಗಿದೆ.

ಡ್ರೋನ್ ಆಧಾರಿತ ರಾಡಾರ್ ಮೂಲಕ ಮೃತದೇಹ ಪತ್ತೆ:
ಅಲ್ಲದೆ, ದಿಬ್ಬಗಳಲ್ಲಿರುವ ಮೃತ ದೇಹಗಳನ್ನು ಗುರುತಿಸಲು ಶನಿವಾರ ದೆಹಲಿಯಿಂದ ಡ್ರೋನ್ ಆಧಾರಿತ ರಾಡಾರ್ ತರಲಾಗುವುದು ಎಂದು ರಾಜ್ಯ ಸಚಿವ ಕೆ.ರಾಜನ್ ಹೇಳಿದ್ದಾರೆ. ಸದ್ಯ ಆರು ಪೊಲೀಸ್ ಶ್ವಾನಗಳು ಶೋಧ ಕಾರ್ಯದಲ್ಲಿದ್ದು, ಇನ್ನೂ ನಾಲ್ವರನ್ನು ತಮಿಳುನಾಡಿನಿಂದ ವಯನಾಡಿಗೆ ಕರೆತರಲಾಗುತ್ತಿದೆ. ಇದುವರೆಗೆ ಒಟ್ಟು 279 ಶವಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವೈದ್ಯಕೀಯ ತಂಡಗಳು ಬಹಿರಂಗಪಡಿಸಿವೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋ ಬೈಡನ್ ಸಂತಾಪ:
ವಯನಾಡ್ ಅವಘಡಲ್ಲಿ ಮೃತಪಟ್ಟವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂತಾಪ ಸೂಚಿಸಿದ್ದಾರೆ. ಜಿಲ್ ಬಿಡೆನ್ ಜೊತೆಗೆ ಟ್ವೀಟ್ ಮಾಡಿದ ಅಧ್ಯಕ್ಷ ಕೇರಳದಲ್ಲಿ ನಡೆದಿರುವ ಘಟನೆಗೆ ಬೇಸರ ವ್ಯಕ್ತಪಡಿಸಿದ ಅವರು ಈ ಸಂಕಷ್ಟದ ಸಮಯದಲ್ಲಿ ಭಾರತೀಯರ ಜೊತೆ ನಾವು ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ