Breaking News

ನಾಗ ಪಂಚಮಿ ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ

Spread the love

ಹಿಂದೂ ಧರ್ಮದಲ್ಲಿ ನಾಗ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನಾಗದೇವತೆಗಳಿಗೆ ಮೀಸಲಾಗಿರುವ ಈ ಹಬ್ಬವನ್ನು ದೇಶದ ಕೆಲವು ರಾಜ್ಯಗಳಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಐದನೇ ದಿನ ಅಂದರೆ ಜುಲೈ 25ರಂದು ಆಚರಿಸಲಾಗುತ್ತದೆ.

ಕೆಲವು ರಾಜ್ಯಗಳಲ್ಲಿ ಇದನ್ನು ಶ್ರಾವಣ ತಿಂಗಳ ಶುಕ್ಲ ಪಕ್ಷದ ಐದನೇ ದಿನ ಅಂದರೆ ಆಗಸ್ಟ್ 9ರಂದು ಆಚರಿಸಲಾಗುತ್ತದೆ.

ಬಹುತೇಕ ಕಡೆ ಈ ಹದಿನೈದು ದಿನಗಳ ಕಾಲ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಶ್ರಾವಣ ಮಾಸ ಶಿವನ ಅಚ್ಚುಮೆಚ್ಚಿನ ತಿಂಗಳು ಮತ್ತು ಈ ಮಾಸದಲ್ಲಿ ಶಿವನೊಂದಿಗೆ ನಾಗದೇವತೆಯನ್ನು ಪೂಜಿಸುವ ಸಂಪ್ರದಾಯವೂ ಇದೆ.

ನಾಗ ಪಂಚಮಿಯಂದು ಮುಖ್ಯವಾಗಿ ಎಂಟು ನಾಗದೇವತೆಗಳನ್ನು ಪೂಜಿಸಲಾಗುತ್ತದೆ. ಅವುಗಳು ವಾಸುಕಿ, ಐರಾವತ, ಮಣಿಭದ್ರ, ಕಾಳಿಯ, ಧನಂಜಯ, ತಕ್ಷಕ, ಕಾರ್ಕೋಟಕ್ಷ್ಯ ಮತ್ತು ಧೃತರಾಷ್ಟ್ರ. ಇವುಗಳನ್ನು ಪೂಜಿಸುವುದರಿಂದ ಶುಭ ಫಲಗಳು ಲಭಿಸುವುದು ಮಾತ್ರವಲ್ಲದೆ ಹಾವಿನ ಭಯದಿಂದ ಮುಕ್ತಿ ಸಿಗುತ್ತದೆ. ಹಾಗಾದರೆ ನಾಗ ಪಂಚಮಿಯ ಮಹತ್ವ, ಶುಭ ಸಮಯ ಮತ್ತು ಪೂಜಾ ವಿಧಾನಗಳನ್ನು ತಿಳಿಯೋಣ…

ನಾಗ ಪಂಚಮಿಯಂದು ಅತ್ಯಂತ ಶುಭ ಯೋಗ

ನಾಗ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಈ ಮಂಗಳಕರ ದಿನಾಂಕ 25 ಜುಲೈ 2024 ರಂದು ಇದೆ. ಬಿಹಾರ, ಬಂಗಾಳ, ಒರಿಸ್ಸಾ, ರಾಜಸ್ಥಾನ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಈ ನಾಗಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ಶುಕ್ರಾದಿತ್ಯ ಯೋಗ ಮತ್ತು ಶೋಭನ ಯೋಗದ ಶುಭ ಸಂಯೋಗವೂ ಇರುತ್ತದೆ. ಆದರೆ ಶುಕ್ಲ ಪಕ್ಷದ ಪಂಚಮಿ ತಿಥಿ ಅಂದರೆ ಆಗಸ್ಟ್ 9ರಂದು ದೇಶದ ಇತರ ರಾಜ್ಯಗಳಲ್ಲಿ ನಾಗಪಂಚಮಿಯನ್ನು ಆಚರಿಸಲಾಗುತ್ತದೆ.

ನಾಗ ಪಂಚಮಿ ಆಚರಣೆಯ ಶುಭ ಸಮಯ

ಪಂಚಮಿ ತಿಥಿಯ ಆರಂಭ – ಜುಲೈ 25, ಬೆಳಗ್ಗೆ 4.40

ಪಂಚಮಿ ತಿಥಿಯ ಅಂತ್ಯ – ಜುಲೈ 25, ಮಧ್ಯರಾತ್ರಿ 1:59

ನಾಗ ಪಂಚಮಿಯ ಮಹತ್ವ

ಶ್ರಾವಣ ಮಾಸವು ಮಳೆಗಾಲವಾಗಿದ್ದು, ಈ ಮಾಸದಲ್ಲಿ ಹಾವುಗಳು ಗರ್ಭದಿಂದ ಹೊರಬಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಾಗಪಂಚಮಿಯಂದು ಹಾವುಗಳಿಮದ ಯಾರಿಗೂ ತೊಂದರೆಯಾಗದಂತೆ ಪೂಜಿಸಲಾಗುತ್ತದೆ. ಬಿಹಾರ, ಬಂಗಾಳ ಮೊದಲಾದ ಪ್ರದೇಶಗಳಲ್ಲಿ ಕೃಷ್ಣ ಪಕ್ಷದ ಐದನೇ ದಿನದಂದು ನಾಗ ಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಪಂಚಮಿ ತಿಥಿಯ ಅಧಿಪತಿ ನಾಗದೇವನೇ ಆಗಿದ್ದು, ಈ ದಿನಗಳಲ್ಲಿ ಹಾವುಗಳನ್ನು ಪೂಜಿಸುವುದರಿಂದ ಬಯಸಿದ ಫಲಗಳು ದೊರೆಯುತ್ತವೆ ಮತ್ತು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನದಂದು ನಾಗದೇವತೆಗಳನ್ನು ಪೂಜಿಸುವುದರಿಂದ ಜಾತಕದಲ್ಲಿ ಇರುವ ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದ ದೋಷಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಕಾಲ ಸರ್ಪದೋಷವೂ ಸಹ ದೂರವಾಗುತ್ತದೆ.

ಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಜೀಔನದ ಅಡೆತಡೆಗಳು ದೂರವಾಗುತ್ತವೆ. ಮನುಷ್ಯನು ಹಾವಿನ ಭಯದಿಂದ ಮುಕ್ತನಾಗುತ್ತಾನೆ. ಸರ್ಪ ದೇವರು ಭೂಗತ ಲೋಕದ ಅಧಿಪತಿ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದ್ದರಿಂದ ಭೂಮಿಯನ್ನು ಅಗೆಯುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.

ನಾಗ ಪಂಚಮಿ ಪೂಜಾ ವಿಧಾನ

*ನಾಗಪಂಚಮಿಯ ದಿನದಂದು, ಬೆಳಿಗ್ಗೆ ಸ್ನಾನ ಮಾಡಿದ ನಂತರ, ಶಿವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಉಪವಾಸವನ್ನು ಆರಂಭಿಸಬೇಕು.

*ಮನೆಯ ಮುಖ್ಯ ದ್ವಾರ, ಮನೆಯ ದೇವಾಲಯ ಮತ್ತು ಅಡುಗೆಮನೆಯ ಎರಡೂ ಹೊರಗಿನ ಬಾಗಿಲುಗಳಿಗೆ ಸೀಮೆಸುಣ್ಣದಿಂದ ಬಣ್ಣ ಹಚ್ಚಿ ಮತ್ತು ಕಲ್ಲಿದ್ದಲಿನಿಂದ ನಾಗದೇವರ ಚಿಹ್ನೆಗಳನ್ನು ಮಾಡಿ.

*ಇತ್ತೀಚಿನ ದಿನಗಳಲ್ಲಿ, ನಾಗದೇವತೆಗಳ ಫೋಟೋಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ, ನೀವು ಅವುಗಳನ್ನು ಬಳಸಬಹುದು. ಇದಕ್ಕೆ ಪೂಜೆ ಮಾಡಿ.

*ಮನೆಯಲ್ಲಿ ನಾಗದೇವತೆಗಳನ್ನು ಪೂಜಿಸಿದ ನಂತರ, ಹೊಲಗಳಲ್ಲಿ ಅಥವಾ ಹಾವುಗಳು ಬರುವ ಸಾಧ್ಯತೆಯಿರುವ ಸ್ಥಳದಲ್ಲಿ ಹಾಲಿನ ಬಟ್ಟಲನ್ನು ಇರಿಸಿ.

*ನಾಗದೇವತೆಯ ಆರಾಧನೆಯಲ್ಲಿ ಬೆಲ್ಲ ಮತ್ತು ಅನ್ನವನ್ನು ತಯಾರಿಸಲಾಗುವುದು. ನಂತರ ದೇವತೆಗಳಿಗೆ ಹಾಲು ಮತ್ತು ನೀರಿನಿಂದ ಸ್ನಾನ ಮಾಡಿಸಿ ಮತ್ತು ನೈವೇದ್ಯವಾಗಿ ಧೂಪ ಮತ್ತು ದೀಪವನ್ನು ಅರ್ಪಿಸಿ.

* ನಿಜವಾದ ಹೃದಯದಿಂದ ನಾಗದೇವತೆಗಳನ್ನು ಧ್ಯಾನಿಸಿ ಆರತಿಯನ್ನು ಮಾಡಿ. ಆರತಿ ಮಾಡಿದ ನಂತರ ನಾಗ ಪಂಚಮಿಯ ಕಥೆಯನ್ನು ಓದಿ


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ