ಜೂನ್ 4 ರಂದು ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾದ ಕಾರಣ, ಚಿನ್ನ ಬೆಳ್ಳಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಇಂದು (ಬುಧವಾರ) ಷೇರು ಮಾರುಕಟ್ಟೆಯಲ್ಲಿ ಸುಧಾರಣೆ ಕಂಡಿದ್ದು ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖವಾಗಿದೆ.
ಜೂನ್ 4 ₹6,68,000 ಇದ್ದ100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 2000 ರೂಪಾಯಿ ಕುಸಿತ ಕಂಡಿದ್ದು ₹ 6,66,000 ಆಗಿದೆ. ಮಂಗಳವಾರ ₹ 7,28,700 ಇದ್ದ 100 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ₹ 7,26,500 ಗೆ ಇಳಿಕೆಯಾಗಿದೆ. ಅಂದರೆ ₹2200 ಕುಸಿತ ಕಂಡಿದೆ.
18 ಕ್ಯಾರೆಟ್ ಚಿನ್ನದ ಬೆಲೆ 1600 ರೂಪಾಯಿ ಕುಸಿದಿದೆ. ಜೂನ್ 4ರಂದು ₹ 5,44,900 ಇದ್ದ ಬೆಲೆ ಇಂದು ₹ 5,46,500 ಗೆ ಕುಸಿದಿದೆ. ಷೇರು ಮಾರುಕಟ್ಟೆ ಮತ್ತಷ್ಟು ಏರಿಕೆಯಾದರೆ ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಕೂಡ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಬೆಳ್ಳಿ ಬೆಲೆ ಕೂಡ ಇಳಿಕೆ
ಚಿನ್ನದ ಬೆಲೆ ಕುಸಿತದ ಜೊತೆಗೆ ಬೆಳ್ಳಿ ಬೆಲೆಯಲ್ಲಿ ಕೂಡ ಕುಸಿತ ಉಂಟಾಗಿದೆ. ಜೂನ್ 4 ರಂದು ಒಂದು ಕೆಜಿ ಬೆಳ್ಳಿ ದರ ₹ 94,000 ಇದ್ದರೆ 2300 ರೂಪಾಯಿ ಕುಸಿದಿದ್ದು ಇಂದಿನ ದರ 91,700 ಆಗಿದೆ. ಬೆಳ್ಳಿ ಬೆಲೆ ಸಂಜೆ ವೇಳೆಗೆ ಮತ್ತಷ್ಟು ಕುಸಿಯುವ ಸಾಧ್ಯತೆ ಕೂಡ ಇದೆ.
ಷೇರು ಮಾರುಕಟ್ಟೆ ಚೇತರಿಕೆ
ಲೋಕಸಭಾ ಚುನಾವಣೆ ಫಲಿತಾಂಶ ಅತಂತ್ರವಾಗುತ್ತದೆ ಎನ್ನುವ ಆತಂಕದಲ್ಲಿ ಮಂಗಳವಾರ ಷೇರುಮಾರುಕಟ್ಟೆ ತೀವ್ರ ಕುಸಿತ ಕಂಡಿತ್ತು. ಆದರೆ ಸಂಜೆ ವೇಳೆಗೆ ಎನ್‌ಡಿಎ ಅಧಿಕಾರ ಹಿಡಿಯುವುದು ಖಚಿತವಾದ ನಂತರ ಬುಧವಾರ ಷೇರುಮಾರುಕಟ್ಟೆ ಸುಧಾರಿಸಿಕೊಂಡಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಸೂಚ್ಯಂಕ 1,463.02 ಅಂಕಗಳಷ್ಟು ಏರಿಕೆ ದಾಖಲಿಸಿದೆ.