Breaking News

ಟೈಗರ್​ 3’ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​: ಮೊದಲ ದಿನವೇ 44 ಕೋಟಿ ಕಲೆಕ್ಷನ್​​!

Spread the love

ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ನಟನೆಯ ‘ಟೈಗರ್​ 3’ ಚಿತ್ರ ಬಿಡುಗಡೆಯಾದ ಮೊದಲ ದಿನ 44.5 ಕೋಟಿ ರೂಪಾಯಿ ಗಳಿಸಿದೆ.

ದೀಪಾವಳಿ ಹಬ್ಬದ ಉಡುಗೊರೆಯಾಗಿ ನವೆಂಬರ್​ 12ರಂದು ಬಾಲಿವುಡ್​ ನಟ​ ಸಲ್ಮಾನ್​ ಖಾನ್​ ಮತ್ತು ನಟಿ ಕತ್ರಿನಾ ಕೈಫ್​ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟೈಗರ್ 3’ ಬಿಡುಗಡೆ ಆಗಿದೆ.

ಮನೀಶ್​ ಶರ್ಮಾ ನಿರ್ದೇಶನದ ಸ್ಪೈ ಥ್ರಿಲ್ಲರ್​ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲನೇ ದಿನವೇ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ. ಇಂಡಸ್ಟ್ರಿ ಟ್ರ್ಯಾಕರ್​ ಸಾಕ್ನಿಲ್​ ಪ್ರಕಾರ, ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 44.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

 

 

ಶಾರುಖ್​ ಖಾನ್​ ನಟನೆಯ ಬ್ಲಾಕ್​ಬಸ್ಟರ್​ ಸಿನಿಮಾಗಳಾದ ‘ಜವಾನ್’​ ಮತ್ತು ‘ಪಠಾಣ್’​ ನಂತರ ‘ಟೈಗರ್​ 3’ ಸಿನಿಮಾ ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಆರಂಭಿಕ ದಿನದ ಅಂಕಿ ಅಂಶಗಳನ್ನು ದಾಖಲಿಸಿದೆ. ಟ್ರೇಡ್​ ಪೋರ್ಟಲ್​ ಪ್ರಕಾರ, ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಚಿತ್ರವು ತನ್ನ ಮೊದಲ ದಿನದಲ್ಲಿ 44.5 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಭಾನುವಾರದಂದು ಚಿತ್ರದ ಒಟ್ಟಾರೆ ಹಿಂದಿ ಆಕ್ಯುಪೆನ್ಸಿ ದರವು 41.33 ಪ್ರತಿಶತದಷ್ಟಿತ್ತು.

‘ಟೈಗರ್​ 3’ ಮುಂಗಡ ಬುಕ್ಕಿಂಗ್​ ಅನ್ನು ನೋಡುವಾಗ ಸಿನಿಮಾವು ಮೊದಲ ದಿನ 35 ಕೋಟಿ ರೂಪಾಯಿ ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಆ ನಿರೀಕ್ಷೆಗಳನ್ನು ಮೀರಿ ಚಿತ್ರವು 40 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಗುಜರಾತ್​, ಮುಂಬೈ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಭಾರತದಲ್ಲಿ ದೀಪಾವಳಿಯ ಸಂಭ್ರಮದ ಮಧ್ಯೆ ‘ಟೈಗರ್​ 3’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಮಾನ್​ ಖಾನ್​ ಆಯಕ್ಷನ್​ ದೃಶ್ಯಗಳು ಅಭಿಮಾನಿಗಳಿಗೆ ಪಟಾಕಿಗಳಿಗಿಂತ ಹೆಚ್ಚು ಮನರಂಜನೆ ನೀಡುತ್ತಿವೆ.


Spread the love

About Laxminews 24x7

Check Also

ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ 1.50 ಕೋಟಿ ರೂಪಾಯಿ ವೆಚ್ಚದ ಕಟ್ಟಡದ ಕಾಮಗಾರಿಗೆ ಚಾಲನೆ

Spread the love ಸಮುದಾಯ ಭವನ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ 1.50 ಕೋಟಿ ರೂಪಾಯಿ ವೆಚ್ಚದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ