Breaking News

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972’ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಡಿಸಿಎಫ್- ವಿಡಿಯೋ ನೋಡಿ

Spread the love

ಚಾಮರಾಜನಗರ: ರಾಜ್ಯದಲ್ಲಿ ಹುಲಿ ಉಗುರು ಹೊಂದಿದ್ದ ಆರೋಪದಲ್ಲಿ ಸೆಲೆಬ್ರಿಟಿಗಳು ವಿವಾದಕ್ಕೀಡಾದ ಬಳಿಕ ವನ್ಯಜೀವಿ ವಸ್ತುಗಳನ್ನು ಹೊಂದುವುದು ‘ಅಪರಾಧ’ ಎಂದು ಸಾರ್ವಜನಿಕರಿಗೆ ಮನದಟ್ಟಾಗುತ್ತಿದೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪ್ ಜೆ.ಕಂಟ್ರಾಕ್ಟರ್ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ಯ ಕುರಿತಾಗಿ ಈಟಿವಿ ಭಾರತ್‌ ಜೊತೆ ಮಾತನಾಡುತ್ತಾ ವಿವರವಾದ ಮಾಹಿತಿ ನೀಡಿದರು.

ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ 1972ರಲ್ಲಿ ಈ ಕಾಯ್ದೆ ಮೊದಲು ಜಾರಿಗೆ ಬಂತು. ಬಳಿಕ ಹಲವು ಬಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. 2022ರಲ್ಲಿ ಮತ್ತೊಂದು ತಿದ್ದುಪಡಿಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಮುಖ್ಯವಾಗಿ 1 ರಿಂದ 4 ರವರೆಗೆ ಶೆಡ್ಯೂಲ್‌ಗಳಿರುತ್ತದೆ. ಈ 4 ಶೆಡ್ಯೂಲ್​ಗಳಲ್ಲಿ ಯಾವ ವನ್ಯಜೀವಿ ಮತ್ತು ಸಸ್ಯವರ್ಗಗಳನ್ನು ಪಟ್ಟಿ ಮಾಡಲಾಗಿದೆಯೋ ಅಂತಹ ಪ್ರಾಣಿಗಳು, ಸಸ್ಯಗಳಿಗೆ ನಾವು ಯಾವುದೇ ರೀತಿಯ ಹಾನಿ ಉಂಟು ಮಾಡುವಂತಿಲ್ಲ. ಆದ್ದರಿಂದ ಈ ಕಾಯ್ದೆಯಡಿ ಇವುಗಳಿಗೆ ರಕ್ಷಣೆ ನೀಡಲಾಗುತ್ತದೆ.

ನಾಲ್ಕು ಶೆಡ್ಯೂಲ್​ಗಳಲ್ಲಿ ಪಟ್ಟಿಯಾಗಿರುವ ಪ್ರಾಣಿಗಳ ಅಥವಾ ಸಸ್ಯಗಳ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಏನಾದರೂ ಕಾಡಿನಿಂದ ಆಚೆ ತಂದರೆ ದಂಡದೊಂದಿಗೆ ಶಿಕ್ಷೆ ಆಗುತ್ತದೆ. ನೈಸರ್ಗಿಕವಾಗಿ ಹೊಲ-ಗದ್ದೆಗಳಲ್ಲಿ ನವಿಲಿನ ಗರಿ, ಮುಳ್ಳುಹಂದಿಯ ಮುಳ್ಳುಗಳು ಬಿದ್ದಿರುವುದನ್ನು ಇಟ್ಟುಕೊಳ್ಳಬಹುದು. ಇಟ್ಟುಕೊಂಡರೆ ಶಿಕ್ಷೆ ಆಗುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಕಾಡಿನಿಂದ ಪ್ರಾಣಿಯನ್ನು ಕೊಂದು ತೆಗೆದುಕೊಂಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ.

 


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ