ಬೆಂಗಳೂರು: ಸಾರಿಗೆ ಮತ್ತು ಕೈಗಾರಿಕಾ ಉತ್ಪಾದನೆಯಂತಹ ಹೆಚ್ಚು ಹೊರಸೂಸುವ ವಲಯಗಳಿಂದ ಇಂಗಾಲವನ್ನು ಹೊರತೆಗೆಯಲು ಗ್ರೀನ್ ಹೈಡ್ರೋಜನ್(ಹಸಿರು ಜಲಜನಕ) ಅನ್ನು ಶುದ್ಧ ಇಂಧನ ಪರಿಹಾರವೆಂದು ವಿಶ್ವದಾದ್ಯಂತ ಪ್ರಚಾರ ಮಾಡಲಾಗುತ್ತಿದೆ.
ಭಾರತ ನೇತೃತ್ವದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಈ ವರ್ಷದ ಆರಂಭದಲ್ಲಿ ಗ್ರೀನ್ ಹೈಡ್ರೋಜನ್ ಇನ್ನೋವೇಶನ್ ಸೆಂಟರ್ ಅನ್ನು ಪ್ರಾರಂಭಿಸಿತು. ಇದು ಗ್ರೀನ್ ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವೇ $2.3 ಬಿಲಿಯನ್ ಅನ್ನು ಅನುಮೋದಿಸಿತು. ನವದೆಹಲಿಯಲ್ಲಿ ಈ ವಾರ ನಡೆಯಲಿರುವ ಶೃಂಗಸಭೆಯಲ್ಲಿ ಜಿ-20 ನಾಯಕರು ಹಸಿರು ಜಲಜನಕದ ಉತ್ಪಾದನೆ ಮತ್ತು ಪೂರೈಕೆಯ ಕುರಿತು ಜಾಗತಿಕ ಸಹಕಾರದ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಗ್ರೀನ್ ಹೈಡ್ರೋಜನ್/ಹಸಿರು ಜಲಜನಕ ಎಂದರೇನು?: ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ಅನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಅಥವಾ ನೈಸರ್ಗಿಕ ಅನಿಲ ಪೈಪ್‌ಗಳ ಮೂಲಕ ತಲುಪಿಸಬಹುದಾಗಿದೆ.
ತುಂಬಾ ಸರಳವಾದ ಭಾಷೆಯಲ್ಲಿ ಹೇಳುವುದಾದರೆ “ಹಸಿರು ಜಲಜನಕವನ್ನು (Green hydrogen) ಅತ್ಯಂತ ಪರಿಶುದ್ಧವಾದ ಜಲಜನಕ ಎನ್ನಬಹುದು. ಇದು ಅತ್ಯಂತ ಪರಿಶುದ್ಧ ಮತ್ತು ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಹಸಿರು ಜಲಜನಕ ಎನ್ನುತ್ತಾರೆಯೇ ಹೊರತು ಇದರ ಬಣ್ಣ ಹಸಿರು ಎಂದಲ್ಲ”. ಈ ಹಸಿರು ಜಲಜನಕದ ಜತೆಗೆ, ನೀಲಿ ಜಲಜನಕ, ಕಂದು ಅಥವಾ ಕಪ್ಪು ಜಲಜನಕಗಳು ಕೂಡಾ ಇವೆ.