ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24 ರ ಸಾಲಿನ ಮಧ್ಯಂತರ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ನಡುವೆ ಹಲವು ಯೋಜನೆಗಳಿಗೆ ಒತ್ತು ನೀಡಿ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್ನಲ್ಲಿ ಈ ಹಿಂದಿನ ಸರ್ಕಾರವನ್ನು ಟೀಕಿಸಿದರು.
ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿದೆ ಎಂದು ದೂರಿದರು.
ಕಲ್ಯಾಣ ರಾಜ್ಯದ ಕನಸಿನ ಬಜೆಟ್ ಅನ್ನು ಮಂಡಿಸಿರುತ್ತಿರುವುದಾಗಿ ಹೇಳಿದ ಅವರು, 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ ಎಂದರು. ಈ ಬಜೆಟ್ನ ಗಾತ್ರ ಬಜೆಟ್ ಗಾತ್ರ 3 ಲಕ್ಷದ 27 ಸಾವಿರ ಕೋಟಿ ರೂ ಆಗಿದೆ. ಇನ್ನು ಈ ಬಜೆಟ್ನಲ್ಲಿ ವಿವಿಧ ಕ್ಷೇತ್ರಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಮತ್ತು ರಾಜ್ಯಕ್ಕೆ ಆದಾಯಗಳ ನಿರೀಕ್ಷೆ ಏನು ಎಂಬ ಕುರಿತು ಮಾಹಿತಿ ಇಲ್ಲಿದೆ.
ಯಾವ ಇಲಾಖೆಗೆ ಎಷ್ಟು ಹಂಚಿಕೆ
ಶಿಕ್ಷಣ ಇಲಾಖೆ : 37597 ಕೋಟಿ ರೂ ಅನುದಾನ ಹಂಚಿಕೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ: 24166 ಕೋಟಿ ರೂ
ಇಂಧನ ಇಲಾಖೆ 22.773 ಕೋಟಿ ರೂ
ನಗರಾಭಿವೃದ್ಧಿ ಮತ್ತು ನೀರಾವರಿ ಇಲಾಖೆ: 19.44 ಕೋಟಿ ರೂ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ: 18 .38 ಕೋಟಿ ವೆಚ್ಚ
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16. 638 ಕೋಟಿ ರೂ ವೆಚ್ಚ
ಕಂದಾಯ ಇಲಾಖೆಗೆ: 16167 ಕೋಟಿ ರೂ ಅನುದಾನ ಹಂಚಿಕೆ
ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14 950 ಕೋಟಿ ರೂ ವೆಚ್ಚ
ಸಮಾಜ ಕಲ್ಯಾಣ ಇಲಾಖೆ: 11.173 ಕೋಟಿ ರೂ
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ: 10460 ಕೋಟಿ ರೀ
ಲೋಕೋಪಯೋಗಿ ಇಲಾಖೆಗೆ: 10143 ಕೋಟಿ ರೂ
ಕೃಷಿ ಮತ್ತು ತೋಟಗಾರಿಕೆ ಇಲಾಖೆ: 5 860 ಕೋಟಿ ರೂ
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 324 ಕೋಟಿ ರೂ
ಬಜೆಟ್ನಲ್ಲಿ ಆದಾಯದ ನಿರೀಕ್ಷೆ
ವಾಣಿಜ್ಯ ತೆರಿಗೆಗಳಿಂದ (ಜಿಎಸ್ಟಿ ಸೇರಿ) 1.1000 ಕೋಟಿ ಆದಾಯ ನಿರೀಕ್ಷೆ
ಅಬಕಾರಿ ಇಲಾಖೆಯಿಂದ 36.000 ಕೋಟಿ ರೂ
ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ 25000 ಕೋಟಿ ರೂ
ಮೋಟಾರು ವಾಹನ ತೆರಿಗೆಗಳಿಂದ 11.500 ಕೋಟಿ ರೂ
ಇತರೆ ತೆರಿಗೆಯಿಂದ 2153 ಕೋಟಿ ರೂ
ಗಣಿ ಮತ್ತು ಭೂ ವಿಜ್ಞಾನ; 9.000 ಕೋಟಿ ರೂ
ಒಟ್ಟು 2,38,410 ಕೋಟಿ ರೂ ರಾಜಸ್ವ ಜಮೆ. ಸ್ವಂತ ತೆರಿಗೆ, ಜಿಎಸ್ಟಿ ಪರಿಹಾರ ಎಲ್ಲವನ್ನು ಒಳಗೊಂಡಂತೆ 1.75,653 ಕೋಟಿ ಸಂಗ್ರಹ. ತೆರಿಗೆಯೇತರ ರಾಜಸ್ವಗಳಿಂದ ಸಂಗ್ರಹ 12.500 ಕೋಟಿ ರೂ. ಆಗಿದೆ.