ರಾಯಚೂರು: ರಂಜಾನ್ ಹಬ್ಬದ ಪ್ರಯುಕ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿದ ವಿವಿಧ ಗ್ರಾಮಗಳ ಮುಸ್ಲಿಮರು ಸಾಮೂಹಿಕವಾಗಿ ಶನಿವಾರ ರಾಯರ ದರ್ಶನ ಪಡೆದರು.
ರಾಯರ ದರ್ಶನದ ಬಳಿಕ ಮಠದ ಪ್ರಕಾರದಲ್ಲಿ ಕುಳಿತಿದ್ದ ಮುಸ್ಲಿಂ ಭಕ್ತರಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದ ವಿತರಿಸಿದರು.
‘ಸಂವಿಧಾನದಲ್ಲಿ ನಂಬಿಕೆ ಹೊಂದಿ ನಿಮ್ಮ ಧರ್ಮ ಪಾಲನೆ ಮಾಡುವುದರ ಜೊತೆಯಲ್ಲಿಯೇ ಎಲ್ಲರೊಂದಿಗೆ ಒಂದಾಗಿ ಬಾಳಬೇಕು. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ಶ್ರೀಗಳು ಸಂದೇಶ ನೀಡಿದರು.

Laxmi News 24×7