ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಜೆಡಿಎಸ್ ಎಲ್ಲರಿಗಿಂತಲೂ ಮುಂದೆ ಎನ್ನುವಂತೆ ತಿಂಗಳ ಹಿಂದೆಯೇ ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಪ್ರಚಾರ ನಡೆಸುತ್ತಿದೆ.
ಕಾಂಗ್ರೆಸ್, ಬಿಜೆಪಿ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.
ಈಗಾಗಲೇ ಒಂದೊಂದು ರೌಂಡ್ ಪ್ರಚಾರ ಮುಗಿಸಿದ್ದು, ಶೀಘ್ರದಲ್ಲೇ ಟಿಕೆಟ್ ಘೋಷಣೆ ಮಾಡುವ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಲು ಮುಹೂರ್ತ ಕೂಡಿ ಬಂದಿದೆ.
ಈಗಾಗಲೇ ರಾಜ್ಯ ಸರ್ಕಾರಕ್ಕೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದ ಕೇಂದ್ರ ಚುನಾವಣಾ ಆಯೋಗ ಇದೇ ಮಾರ್ಚ್ 27ರಂದು ಕರ್ನಾಟಕದಲ್ಲಿ ನಡೆಯುವ ಚುನಾವಣೆ ಹಾಗು ಫಲಿತಾಂಶದ ದಿನಾಂಕಗಳನ್ನು ಪ್ರಕಟ ಮಾಡಲಿದೆ ಎನ್ನುವ ಮಾಹಿತಿ ನಿಮ್ಮ “ಪ್ರತಿಧ್ವನಿ”ಗೆ ಲಭ್ಯವಾಗಿದೆ.
ಮೂಲಗಳ ಪ್ರಕಾರ ಏಪ್ರಿ;ಲ್ ಕೊನೆಯ ವಾರ ಹಾಗು ಮೇ ಮೊದಲ ವಾರ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಮಾರ್ಚ್ 27ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದ್ದು, ಏಪ್ರಿಲ್ ತಿಂಗಳಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಅಬ್ಬರದ ಪ್ರಚಾರ ನಡೆಯಲಿದೆ.
Laxmi News 24×7