Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಬೃಹತ್ ಕೃಷಿ ಮೇಳ ಕಾರ್ಯಕ್ರಮಕೆ

ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಬೃಹತ್ ಕೃಷಿ ಮೇಳ ಕಾರ್ಯಕ್ರಮಕೆ

Spread the love

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ರವಿವಾರ ದಿ 15 ರಿಂದ 19 ರವರೆಗೆ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೃಷಿ ಮಳಿಗೆ ನಿರ್ಮಿಸಲು ಅಡಿಗಲ್ ಪೂಜೆ ಸಿದ್ದೇಶ್ವರ ದೇವರ ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಇವರು ನೆರವೇರಿಸಿ ಚಾಲನೆ ನೀಡಿದರು.

ಬುದುವಾರ ರಂದು ಐನಾಪುರದಲ್ಲಿ ಕೃಷಿ ಮೇಳದ 150 ಮಳಿಗೆಳು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧೆ ಸ್ಥಾನವಾಗಿರುವ ಐನಾಪುರದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಭವ್ಯ ಕೃಷಿ ಮಳೆ ನಿರಂತರವಾಗಿ ಜರುಗುತ್ತಿದೆ. ಈ ವರ್ಷದ 53ನೇ ಜಾತ್ರಾ ಮೋಹೊತ್ಸವ ಹಾಗೂ 30ನೇ ಕೃಷಿ ಮೇಳ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ನಿರ್ಧಾರ ಕೈಗೊಂಡಿದ್ದಾರೆ.

ಕೃಷಿ ಮೇಳ ಮಳಿಗೆಗಳ ನಿರ್ಮಿಸುವ ನಿಮಿತ್ಯವಾಗಿ ಗುದ್ದಲಿ ಪೂಜೆ ನೆರವೇರಿಸಿ ಜಾತ್ರಾ ಕಮಿಟಿಯ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕರೋನಾ ಹಾವಳಿಯಿಂದ ಜಾತ್ರೆ ಆಚರಿಸಲು ಅನೇಕ ತೊಂದರೆಗಳು ನಿರ್ಮಾಣವಾಗಿದ್ದವು. ಈ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ರೈತ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದು ಇಲ್ಲಿಗೆ ಅನ್ಯಪ್ರಸಾದ, ಧಾರ್ಮಿಕ ಕಾರ್ಯಕ್ರಮ, ರೈತರಿಗಾಗಿ ಕೃಷಿ ಪ್ರದರ್ಶನ, ದನಗಳ ಬೃಹತ್ ಪ್ರದರ್ಶನ, ಶ್ವಾನ ಪ್ರದರ್ಶನ, ಗುಂಡು ಹಾಗೂ ಸಂಗ್ರಾಮ ಕಲ್ಲು ಎತ್ತುವ ಸ್ಫರ್ಧೆ, ವಿವಿದ ಶರ್ಯತ್ತುಗಳು, ಜಾತ್ರೆ ನಿಮಿತ್ಯ ಹಮ್ಮಿಕೊಳ್ಳಲಾಗಿದೆ. ಜನವರಿ 15ರಿಂದ 19ರವರೆಗೆ ಕೃಷಿ ತಜ್ಞರು, ಗಣ್ಯರು ಭಕ್ತರು ಜಾತ್ರೆಗೆ ಆಗಮಿಸಿ ಶೋಭೆ ತರಲಿದ್ದಾರೆ, ಇದರ ಲಾಭ ಎಲ್ಲ ರೈತ ಬಾಂಧವರು ತೆಗೆದುಕೊಳ್ಳಬೇಕೆಂದು ಆಹ್ವಾನಿಸಿದರು


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ