Breaking News

ಹುಕ್ಕೇರಿ ನಗರದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ೨ಎ ಮಿಸಲಾತಿಗಾಗಿ ಬೃಹತ್ ಸಮಾವೇಶ

Spread the love

ಹುಕ್ಕೇರಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಬ್ಯಾನರ ಗಳ ಭರಾಟೆ, ರಸ್ತೆ, ಬೀದಿ ದೀಪದ ಕಂಬ , ಕಟ್ಟಡಗಳ ಮೇಲೆ ಸ್ವಾಗತ ಫಲಕಗಳು ನಗರ ಪ್ರವೇಶ ದ್ವಾರಗಳಲ್ಲಿ  ಕಮಾನುಗಳು ಹಿಗೆ ಹತ್ತು ಹಲವಾರು ರೀತಿಯಲ್ಲಿ ಹುಕ್ಕೇರಿ ಮದವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಹುಕ್ಕೇರಿ ನಗರದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತರಿಗೆ ೨ಎ ಮಿಸಲಾತಿಗಾಗಿ ಬೃಹತ್ ಸಮಾವೇಶ ಆರಂಭಗೊಂಡಿದೆ. ಸಾವಿರಾರು ಜನರು ಇದರಲ್ಲಿ ಭಾಗಿಯಾಗಿದ್ದಾರೆ. ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಹೊತ್ತು ಸಾಗುತ್ತಿರುವ ವಾಹನಗಳು, ಅದರ ಮುಂದೆ ಪೂರ್ಣ ಕುಂಭ ಹೊತ್ತ ಮಹಿಳೆಯರು, ಸಾರೋಟದಲ್ಲಿ ಕೂಡಲಸಂಗಮ ಗುರುಪೀಠದ ಬಸವಜಯಮೃತ್ಯುಂಜಯ ಸ್ವಾಮಿಜೀಗಳು ಭಾಗಿಯಾಗಿದ್ದಾರೆ.

ಮಾಜಿ ಸಚಿವ ಎ ಬಿ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಿಕ  ಇನ್ನುಳಿದ ಗಣ್ಯರ ಪ್ರಮುಖ ಉಪಸ್ಥಿತಿಯಲ್ಲಿ ಮೆರವಣಿಗೆಯೂ ನಡೆದು, ಮುಂದೆ ಸಮಾವೇಶದ ಸ್ಥಳಕ್ಕೆ ತಲುಪಿ ಸಭೆಯಲ್ಲಿ ಪರಿವರ್ತಿತಗೊಳ್ಳಲಿದೆ.

ಪಕ್ಷಾತೀತವಾಗಿ ಪಂಚಮಸಾಲಿ ಲಿಂಗಾಯತ ಮುಖಂಡರು ತಮ್ಮ ಅನುಯಾಯಿಗಳು ಜೊತೆ ಸ್ವಾಗತ ಬ್ಯಾನರಗಳನ್ನು ನಗರ ತುಂಬೆಲ್ಲಾ ಹಾಕಿದ್ದಾರೆ.

ಕೆಲ ದಿನಗಳಿಂದ ಯಾವದೇ ಬೃಹತ್ ಸಮಾರಂಭಗಳು ಜರುಗಿರಲಿಲ್ಲಾ ಹಾಗೂ ಮುಂದಿನ ವರ್ಷ ಚುನಾವಣೆ ಇರುವದರಿಂದ ಹಾಲಿ ಮತ್ತು ಮಾಜಿ ಶಾಸಕರು  ಮತ್ತು ಟಿಕೇಟ್ ಆಕಾಂಕ್ಷಿಗಳು ತಮ್ಮ ಬಲವನ್ನು ಪ್ರದರ್ಶಿಸಲು ಈ ಸಮಾರಂಭದ ಲಾಭ ಪಡೆಯಲು ತೆರೆ ಮರೆಯಲ್ಲಿ ಕಸರತ್ತು ನಡೆಸಿ ಪ್ರಚಾರ ಗಿಟ್ಟಿಸಿಕೋಳ್ಳುವ ತಂತ್ರ ಮಾಡುತ್ತಿದ್ದರೆ ಎಂದು ಜನರು ಆಡಿಕೋಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ