Breaking News

ದಾರ್ಶನಿಕ ಮಹರ್ಷಿ ವಾಲ್ಮೀಕಿ: ಇಂದು ಜಯಂತಿ

Spread the love

ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥವಾಗಿದೆ. ಮಹರ್ಷಿ ವಾಲ್ಮೀಕಿ ಈ ಮಹಾಕಾವ್ಯದ ರಚನೆಕಾರರು. ಬೇಡ ಜನಾಂಗಕ್ಕೆ ಸೇರಿದ ಈ ಕೃತಿಕಾರ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂದು ಅವರ ಜಯಂತಿಯನ್ನು ಎಲ್ಲೆಡೆ ಗೌರವಪೂರ್ವಕವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

 

 | ಪ್ರೇಮಾ ಕಾಟನಾಯಕ

ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯ ಕೃತಿಗಳಲ್ಲೊಂದಾದ ರಾಮಾಯಣವು ಹಿಂದೂಗಳ ಪವಿತ್ರ ಗ್ರಂಥಗಳಲ್ಲೊಂದಾಗಿದೆ. ಈ ಮಹಾಕಾವ್ಯವು ಶ್ರೀ ಮಹರ್ಷಿ ವಾಲ್ಮೀಕಿ ಅವರಿಂದ ರಚಿತವಾಗಿದೆ. ಈ ಕಾವ್ಯವು 24,000 ಶ್ಲೋಕಗಳನ್ನು, ಏಳು ಕಾಂಡಗಳನ್ನು ಹೊಂದಿರುವ ಶ್ರೇಷ್ಠ ಕೃತಿಯಾಗಿದೆ.

ಬೇಡ ಜನಾಂಗ ದವರಾದ ಮಹರ್ಷಿ ವಾಲ್ಮೀಕಿ ಈ ಜನಾಂಗಕ್ಕೆ ಸೀಮಿತವಾಗಿರದೆ ಇಡೀ ಮನುಕುಲಕ್ಕೆ ಶ್ರೇಷ್ಠ ದಾರ್ಶನಿಕರಾಗಿದ್ದಾರೆ. ವಾಲ್ಮೀಕಿ ದರೋಡೆಕೋರ ನಾಗಿದ್ದನೆಂಬುದಕ್ಕೆ ಯಾವುದೇ ಆಧಾರ ಇಲ್ಲ, ಅದೊಂದು ಕಟ್ಟುಕತೆಯೆಂದು ಪಂಜಾಬ್ ಮತ್ತು ಹರಿಯಾಣದ ಉಚ್ಚ ನ್ಯಾಯಾಲಯಗಳು ಮತ್ತು ಭಾರತ ಸವೋಚ್ಚ ನ್ಯಾಯಾಲಯ 2010ರಲ್ಲಿ ತೀರ್ಪು ನೀಡಿವೆ. ಅದರಿಂದ ದಾರ್ಶನಿಕನೊಬ್ಬನ ಮೇಲಿದ್ದ ಆರೋಪಕ್ಕೆ ಉತ್ತರ ಸಿಕ್ಕಂತೆ ಆಗಿದೆ. ವಾಲ್ಮೀಕಿ ಒಬ್ಬ ಶ್ರೇಷ್ಠ ವ್ಯಕ್ತಿ ಎಂಬ ಗೌರವ ಸಿಕ್ಕಂತಾಗಿದೆ.

ಹಿಂದೂ ಧಾರ್ವಿುಕ ನಂಬಿಕೆಯ ಪ್ರಕಾರ ರಾಮನು ವಿಷ್ಣುವಿನ ಅವತಾರವಾಗಿ ಪೂಜಿಸಲ್ಪಡುತ್ತಾನೆ. ರಾಮನ ಅವತಾರವು ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದಾಗಿದೆ. ರಾಮಾಯಣದಲ್ಲಿ ರಾಮನ ವ್ಯಕ್ತಿತ್ವವನ್ನು ಪರಿಚಯಿಸುತ್ತ ಶಾಂತಿ, ವಿಶ್ವಾಸ, ನಂಬಿಕೆ ಮತ್ತು ತ್ಯಾಗಗಳಿಂದ ಬದುಕಿನ ಸಾಕ್ಷಾತ್ಕಾರ ಆಗುತ್ತದೆಂದು ಹೇಳಿದ್ದಾರೆ. ರಾಮನ ಧ್ಯಾನದಲ್ಲಿ ಮಗ್ನರಾದ ವಾಲ್ಮೀಕಿ ಮಹರ್ಷಿಯನ್ನು ನಮಸ್ಕರಿಸುತ್ತಾ ಬುಧ ಕೌಶಿಕ ಮುನಿ ಶ್ರೀ ರಾಮರಕ್ಷಾ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ, ‘ಕೂಜಂತಂ ರಾಮ ರಾಮೇತಿ, ಮಧುರಂ ಮಧುರಾಕ್ಷರಮ್ ಆರುಹ್ಯ ಕವಿತಾ ಶಾಖಂ| ವಂದೇ ವಾಲ್ಮೀಕಿ ಕೋಕಿಲಮ್. ಇದರರ್ಥ ‘ಕಾವ್ಯವೆಂಬ ಮರದ ಮೇಲೆ ರಾಮ… ರಾಮ…. ಎಂದು (ಕೂಜಂತಂ) ಹಕ್ಕಿಯ ಇಂಪಾದ ಧ್ವನಿ ಎತ್ತಿ ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದನೆ…’ ಎಂದು. ಈ ರೀತಿ ಕಾವ್ಯಾತ್ಮಕವಾಗಿ ಮಹರ್ಷಿಗಳಿಗೆ ನಮಸ್ಕರಿಸುತ್ತಾರೆ. ಇದು ವಾಲ್ಮೀಕಿಗೆ ರಾಮನ ಬಗ್ಗೆ ಇರುವ ಅಚಲ ನಂಬಿಕೆಯನ್ನು ಎತ್ತಿ ತೋರಿಸುವ ಸ್ತೋತ್ರವಾಗಿದೆ. ರಾಮನು ಅಯೋಧ್ಯೆಯ ದಶರಥ ಮತ್ತು ಕೌಸಲ್ಯಾ ದೇವಿಯ ಪುತ್ರ. ಮಿಥಿಲೆಯ ಜನಕ ಮಹಾರಾಜನ ಮಗಳಾದ ಸೀತಾದೇವಿಯ ಸ್ವಯಂವರ ನಡೆದಾಗ ಶ್ರೀರಾಮನು ಶಿವ ಧನಸ್ಸನ್ನು ಮುರಿದು ನಂತರ ಸೀತಾ-ರಾಮರ ಕಲ್ಯಾಣವಾಗುತ್ತದೆ. ಈ ಕಾವ್ಯದಲ್ಲಿ ರಾಮನ ಸರ್ವಶ್ರೇಷ್ಠತೆ, ಶಬರಿಯ ಭಕ್ತಿ, ಸೀತೆಯ ನಂಬಿಕೆ, ರಾವಣನ ಮೋಹಕತೆ, ಮಾರೀಚನ ಮಾಯಾಜಾಲ, ಭರತನ ಭ್ರಾತೃತ್ವ, ಸಂಜೀವಿನಿ ಪರ್ವತದ ಮಹಿಮೆ, ಪುಷ್ಪಕ ವಿಮಾನದ ಪರಿಚಯ, ವಾನರ ಬಲಾಬಲ… ಹೀಗೆ ಅನೇಕ ಸಂಗತಿಗಳನ್ನು ನಮಗೆ ಪರಿಚಯಿಸುತ್ತಾರೆ.

ಇದರಿಂದ ವಾಲ್ಮೀಕಿಗಿದ್ದ ಅಪಾರ ಜ್ಞಾನದ ಅರಿವು ನಮಗಾಗುತ್ತದೆ. ಆದ್ದರಿಂದಲೇ ವಾಲ್ಮೀಕಿ ರಾಮಾಯಣವು ಹಿಂದುಗಳ ಅತ್ಯಂತ ಪವಿತ್ರ ಗ್ರಂಥವೆಂದೇ ಪರಿಗಣಿಸಲ್ಪಟ್ಟಿದೆ. ಪ್ರತಿಯೊಬ್ಬ ವ್ಯಕ್ತಿಯ ವಿಚಾರ, ಸ್ವಭಾವದಲ್ಲೂ ರಾಮನೂ ಇರುವನು; ರಾವಣನೂ ಇರುವನು. ವಾಲ್ಮೀಕಿ ಈ ಕೃತಿಯಲ್ಲಿ ಹೀಗೆ ಭಾವನಾತ್ಮಕ ಭಾವದ ಮೂಲಕ ಮಹಾದಾರ್ಶನಿಕರಾಗಿ, ತತ್ವಜ್ಞಾನಿಯಾಗಿ, ಸಮಾಜ ಸುಧಾರಕರಾಗಿ, ಶಿಕ್ಷಣ ತಜ್ಞರಾಗಿ, ರಾಜನೀತಿಜ್ಞರಾಗಿ ನಮಗೆ ಕಾಣಿಸಿಕೊಳ್ಳುತ್ತಾರೆ. ರಾಮಾಯಣ ಮಹಾಕಾವ್ಯದಲ್ಲಿ ಕ್ರೌರ್ಯ -ಹಿಂಸೆ -ಸಮಾಜಕ್ಕೆ ಮಾರಕ ಎಂದು ತಿಳಿಸಿಕೊಡುತ್ತಾರೆ. ಜೀವನದಲ್ಲಿ ಸುಖ- ನೆಮ್ಮದಿ – ಶಾಂತಿ ದೊರೆಯಬೇಕಾದಲ್ಲಿ ನೈತಿಕ ಚೌಕಟ್ಟಿನಲ್ಲಿ ನಡೆಯಬೇಕು, ಮೀತಿ ಮೀರಿದರೆ ಬದುಕು ದುಸ್ತರ; ಯುದ್ಧಗಳು, ಕ್ರಾಂತಿಗಳು, ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯಬೇಕು ಎಂಬುದನ್ನು ಈ ಮಹಾಕಾವ್ಯ ಸಾರಿ ಸಾರಿ ಹೇಳುತ್ತದೆ. ಮನುಷ್ಯ ತಪ್ಪುಗಳನ್ನು ತಿದ್ದಿಕೊಂಡು ಬದುಕಬೇಕು, ಸ್ವಾಮಿನಿಷ್ಠೆ ಹೊಂದಿರಬೇಕು, ನ್ಯಾಯಯುತವಾಗಿ ಬದುಕಬೇಕು ಎಂಬ ತತ್ವವನ್ನು ಈ ಮಹಾಕಾವ್ಯದಲ್ಲಿ ಮಂಡಿಸುತ್ತಾ, ಇದೊಂದು ಪವಿತ್ರ ಗ್ರಂಥವಾಗಿ ಮಾನವ ಕುಲವನ್ನು ಮುನ್ನಡೆಸಲು ಸಾಧ್ಯವಾಗಿದೆ. ಇಂತಹ ಮಹಾಕಾವ್ಯವನ್ನು ನೀಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಗಳಿಗೆ ಸಾವಿರ ಕೋಟಿ ನಮನಗಳು.

 ನಮ್ಮ ಸಮುದಾಯದ ಸಾಂಸ್ಕೃತಿಕ ನಾಯಕ ವಾಲ್ಮೀಕಿ ಜಯಂತಿ ಈ ಬಾರಿ ವಿಜಯೋತ್ಸವವಾಗಿ ಆಚರಿಸಲ್ಪಡುತ್ತಿದೆ. ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡು ಜಯಂತಿಗೆ ಅರ್ಥ ತಂದಿದೆ. ವಾಲ್ಮೀಕಿ ಈ ನಾಡಿಗೆ ಸಲ್ಲಿಸಿದ ಸೇವೆಯನ್ನು ಈ ಮೂಲಕ ಗೌರವಿಸಿದೆ. ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ತಳ ಸಮುದಾಯದ 157 ಜಾತಿಗಳಿಗೆ ನ್ಯಾಯ ಸಿಕ್ಕಿದೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಈ ನಾಡಿನ ಐತಿಹಾಸಿಕ ಪುರುಷರಾಗಿದ್ದಾರೆ. ರಾಮಾಯಣದಲ್ಲಿ ಅವರು ಪ್ರತಿಪಾದಿಸಿದ ಎಲ್ಲ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ನಾಡಿನ ಎಲ್ಲ ಜನ ವಾಲ್ಮೀಕಿ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು.

| ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ

ಆರು ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ 2022ನೇ ಸಾಲಿನ ಪ್ರಶಸ್ತಿಗಳನ್ನು ಆರು ಸಾಧಕರಿಗೆ ಘೋಷಿಸಲಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ, ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರದ ಶ್ರೀ ಮಹರ್ಷಿ ವಾಲ್ಮೀಕಿ ಆದಿ ಗುರುಪೀಠದ ಎಲ್.ಮುನಿಸ್ವಾಮಿ ಮತ್ತು ಮೈಸೂರು ಸರಸ್ವತಿಪುರಂನ ಸುಭಾಷ್ ಎಸ್.ಎಚ್. ಅವರಿಗೆ, ಇತರೆ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಸಮಾಜ ಸೇವಕ ಮತ್ತು ಕೃಷಿಕ ಎನ್.ನಾಗಪ್ಪ ಮತ್ತು ಧಾರವಾಡ ಜಿಲ್ಲೆಯ ಸಮಾಜ ಸೇವಕ ನಾಗಪ್ಪ ಎಚ್. ಕೋಣಿ ಅವರಿಗೆ, ಕಲಾ ಕ್ಷೇತ್ರದಲ್ಲಿ ಕೂಡ್ಲಿಗಿ ಆಜಾದ್ ನಗರದ ರಂಗಭೂಮಿ ಕಲಾವಿದೆ ಪಿ.ಪದ್ಮ ಮತ್ತು ಬಳ್ಳಾರಿ ದೇವಿನಗರದ ಬಸವನಕುಂಟೆಯ ಉಷಾರಾಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಐದು ಲಕ್ಷ ರೂ. ನಗದು ಮತ್ತು ಇಪ್ಪತ್ತು ಗ್ರಾಂ ಚಿನ್ನ ಹೊಂದಿರಲಿದೆ. ಸಮಾರಂಭವು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

(ಲೇಖಕರು ಶಿಕ್ಷಕರು)

| ಪ್ರೇಮಾ ಕಾಟನಾಯಕ

ನಮ್ಮ ಸಮುದಾಯದ ಸಾಂಸ್ಕೃತಿಕ ನಾಯಕ ವಾಲ್ಮೀಕಿ ಜಯಂತಿ ಈ ಬಾರಿ ವಿಜಯೋತ್ಸವವಾಗಿ ಆಚರಿಸಲ್ಪಡುತ್ತಿದೆ. ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡು ಜಯಂತಿಗೆ ಅರ್ಥ ತಂದಿದೆ. ವಾಲ್ಮೀಕಿ ಈ ನಾಡಿಗೆ ಸಲ್ಲಿಸಿದ ಸೇವೆಯನ್ನು ಈ ಮೂಲಕ ಗೌರವಿಸಿದೆ. ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ತಳ ಸಮುದಾಯದ 157 ಜಾತಿಗಳಿಗೆ ನ್ಯಾಯ ಸಿಕ್ಕಿದೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಈ ನಾಡಿನ ಐತಿಹಾಸಿಕ ಪುರುಷರಾಗಿದ್ದಾರೆ. ರಾಮಾಯಣದಲ್ಲಿ ಅವರು ಪ್ರತಿಪಾದಿಸಿದ ಎಲ್ಲ ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ನಾಡಿನ ಎಲ್ಲ ಜನ ವಾಲ್ಮೀಕಿ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು.

| ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ

(ಲೇಖಕರು ಶಿಕ್ಷಕರು)


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ