Breaking News

ವಿಕ್ರಂತ್ ರೋಣ ಪ್ರಪಂಚ ತೆರೆ ಮೇಲೆ‌ ತೆರೆದುಕೊಂಡಿದೆ. ವಿಅರ್ world ಒಳಗೆ ಹೋದವರೆಲ್ಲಾ ವಾವ್ಹಾ ಎನ್ನುತ್ತಿದ್ದಾರೆ‌.

Spread the love

VR ಪ್ರಪಂಚ..!ವಿಕ್ರಂತ್ ರೋಣ ಪ್ರಪಂಚ ತೆರೆ ಮೇಲೆ‌ ತೆರೆದುಕೊಂಡಿದೆ. ವಿಅರ್ world ಒಳಗೆ ಹೋದವರೆಲ್ಲಾ ವಾವ್ಹಾ ಎನ್ನುತ್ತಿದ್ದಾರೆ‌. ಹಾಗಾದ್ರೆ ವಿಕ್ರಾಂತ್ ರೋಣ ಹೇಗಿದ್ದಾನೆ ಅಂದ್ರೆ….

ಅದೊಂದು ದಟ್ಟಾರಣ್ಯದ ಮಧ್ಯೆ‌ ಇರೋ ಊರು. ಆ ಊರ ಹೆಸರು ಕಮರೊಟ್ಟು.. ಅಲ್ಲಿ ಹೆಣ್ಣು ಮಕ್ಕಳ ಸರಣಿ ಕೊಲೆಗಳು ಆಗುತ್ತಿರುತ್ತವೆ. ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಕೊಲೆಗಳ ತನಿಖೆಗೆಗಾಗಿ ಕಮರೊಟ್ಟು ಊರಿಗೆ ಬರೋ ವಿಕ್ರಾಂತ್ ರೋಣ. ಈ ಇನ್ಸ್‌ಪೆಕ್ಟರ್‌ಗೆ ಈ ಸರಣಿ ಕೊಲೆಗಳ ಕೇಸುಗಳ ಮೇಲೆ ಬಹಳ ಆಸಕ್ತಿ. ಅದು ಯಾಕೆ ಅಂತ ನೀವು ಸಿನಿಮಾ ನೋಡಬೇಕು.. ಮಧ್ಯಂತರದ ವೇಳೆಗೆ ಸ್ವತಃ ವಿಕ್ರಾಂತ್ ರೋಣನ ಮೇಲೆ ಅನುಮಾನ ಸೃಷ್ಟಿಯಾಗುವ ದೃಶ್ಯವಂತೂ ಪ್ರೇಕ್ಷಕನ ತಲೆ ತಿರುಗುವಂತೆ ಮಾಡುತ್ತದೆ. ಅಲ್ಲಿಗೆ ಸರಿಯಾಗಿ ಸಿನಿಮಾದ ಅರ್ಧ ಭಾಗ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ತನಿಖೆ ಇನ್ನಷ್ಟು ಚುರುಕುಗೊಳ್ಳುತ್ತೆ. ಅಂತಿಮವಾಗಿ ನಿಜವಾದ ಕೊಲೆಗಾರ ಎದುರು ಬಂದಾಗ ಪ್ರೇಕ್ಷಕನಿಗೆ ಶಾಕ್…

ವಿಕ್ರಾಂತ್ ರೋಣನಾಗಿ ಸುದೀಪ್ ಅಬ್ಬರಿಸಿದ್ದಾರೆ. ಅವರ ಸ್ಟೈಲ್, ಸಂಭಾಷಣೆಗಳು, ಫೈಟ್ ದೃಶ್ಯಗಳು ಅಭಿಮಾನಿಗಳು ಶಿಳ್ಳೆ ಹೊಡೆವಂತೆ ಮಾಡುತ್ತವೆ. ಎಲ್ಲ ಪಾತ್ರಗಳು ಕತೆಯ ಕಾರಣಕ್ಕೆ ಮುಖ್ಯವಾದರೂ ಲೈಮ್‌ಲೈಟ್ ಇರುವುದು ವಿಕ್ರಾಂತ್ ರೋಣ ಮೇಲೆ ಮಾತ್ರ. ನಿರೂಪ್ ಭಂಡಾರಿಯ ನಟನೆಯೂ ಚೆನ್ನಾಗಿದೆ. ನಟಿ ನೀತಾ ಅಶೋಕ್ ತಮ್ಮ ಮೊದಲ ಸಿನಿಮಾದಲ್ಲಿಯೇ ಅನುಭವಿಯಂತೆ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಮಿಲನಾ ನಾಗರಾಜ್ ಸಹ ಇದ್ದಾರೆ. ಇನ್ನು ಗಡಂಗ್ ರಕ್ಕಮ್ಮ ಹಾಡು ಪ್ರೇಕ್ಷಕರನ್ನ ಕುಣಿಸುತ್ತೆ.

ಅದ್ಧೂರಿ ಮೇಕಿಂಗ್, ಕ್ಯಾಮೆರಾ ಕುಸುರಿ, ಮ್ಯೂಸಿಕ್, ಆರ್ಟ್ ವರ್ಕ್ ಎಲ್ಲವೂ ಹೊಸತು. ಬರೀ ಹೊಸತಲ್ಲ. ಅದೊಂಥರಾ entertainment ಹಬ್ಬ. ಈ ದೃಶ್ಯ ವೈಭವವನ್ನ miss ಮಾಡಿಕೊಳ್ಳಬೇಡಿ, ಸಾಧ್ಯ ಆದಷ್ಟು 3D ಯಲ್ಲೇ ಸಿನಿಮಾ ನೋಡಿ. ಅದರ ಮಜವನ್ನ ಅನುಭವಿಸಿ.

 


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ