Breaking News

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದ 105 ವರ್ಷದ ಅಜ್ಜಿ

Spread the love

ಕೊಪ್ಪಳ: ಕೊರೊನಾ ಹಾಟ್‍ಸ್ಪಾಟ್ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‍ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆ 105 ವರ್ಷದ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೊನಾ ಗೆದ್ದಿದ್ದಾರೆ.

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷ ಭರ್ತಿಯಾಗಿರುವ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಕೊರೊನಾದಿಂದ ಗುಣಮುಖವಾಗಿದ್ದಾರೆ. ಕಳೆದ ವಾರವಷ್ಟೇ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ ಐಸೋಲೇಶನ್ ಆಗಿ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.ಅಜ್ಜಿಗೆ ಚಿಕಿತ್ಸೆ ನೀಡಿದ ಮೊಮ್ಮಗ ಡಾ.ಶ್ರೀನಿವಾಸ ಹ್ಯಾಟಿ ಈ ಕುರಿತು ವಿವರಿಸಿ, ಬೇರೆ ಯಾವುದೇ ಖಾಯಿಲೆಗಳು ಇರದೇ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಯಿತು.

ಅಲ್ಲದೆ ಕಮಲಮ್ಮನವರು ಸಹ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ವಿವರಿಸಿದರು.


Spread the love

About Laxminews 24x7

Check Also

ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ 7 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ,ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ..

Spread the love ಯಮಕನಮರಡಿ ಕ್ಷೇತ್ರದಲ್ಲಿನ ಮಸರಗುಪ್ಪಿ, ಗವನಾಳ, ಗೋಟುರ ಹಾಗೂ ಕೋಚರಿ ಗ್ರಾಮಗಳಲ್ಲಿ ಅಂದಾಜು 1.44 ಕೋಟಿ ರೂ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ