Breaking News
Home / ಜಿಲ್ಲೆ / ಬಿಜಾಪುರ / ಅನ್ಯಧರ್ಮದಲ್ಲಿ ಜನಿಸಿದ್ದರೆ ಬಸವಣ್ಣ ವಿಶ್ವಖ್ಯಾತಿ‌ ಪಡೆಯುತ್ತಿದ್ದ: ಶಿವಾನಂದ ಪಾಟೀಲ

ಅನ್ಯಧರ್ಮದಲ್ಲಿ ಜನಿಸಿದ್ದರೆ ಬಸವಣ್ಣ ವಿಶ್ವಖ್ಯಾತಿ‌ ಪಡೆಯುತ್ತಿದ್ದ: ಶಿವಾನಂದ ಪಾಟೀಲ

Spread the love

ವಿಜಯಪುರ: ಬಸವಣ್ಣ ಇಸ್ಲಾಂ ಧರ್ಮದಲ್ಲಿ ಜನಿಸಿದ್ದರೆ ಮಹ್ಮದ್ ಪೈಗಂಬರರನ್ನು, ಕ್ರೈಸ್ತ ಧರ್ಮದಲ್ಲಿ ಜನಿಸಿದ್ದರೆ ಏಸುವಿಗಿಂತ ಮಿಗಿಲಾಗಿ ಜಗತ್ತನ್ನು ಆವರಿಸಿರುತ್ತಿದ್ದರು. ಆದರೆ ಬಸವಣ್ಣ ಎಂಬ ಮಹಾನ್ ದಾರ್ಶನಿಕ ಕನ್ನಡ ನೆಲದ ಬಾಗೇವಾಡಿಯಲ್ಲಿ ನೆಲೆಸಿದ್ದರಿಂದ ಅವರ ವೈಚಾರಿಕ ಸಂದೇಶಗಳು ಜಗತ್ತಿನ‌ ಮೂಲೆ ಮೂಲೆಗೆ ತಲುಪುವಲ್ಲಿ ವಿಫಲವಾಗಿದೆ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

 

ಮಂಗಳವಾರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಪುರುಷನಿಗೆ ಮಹಿಳೆ ಸಮಾನಳು ಎಂದು ಮೊದಲು ಘೋಷಿಸಿದ್ದೇ ಬಸವಣ್ಣ. ಶ್ರಮದ ಪ್ರತಿಪಾದನೆಗಾಗಿ ಕಾಯಕವೇ ಕೈಲಾಸ ಎಂದು ತತ್ವ ನೀಡಿದ ಬಸವೇಶ್ವರರನ್ನು ಕರ್ನಾಟಕದ ಹೊರತಾಗಿ ಹೊರ ಜಗತ್ತಿಗೆ ಕೊಂಡೊಯ್ಯುವಲ್ಲಿ ಲಿಂಗಾಯತರ ವೈಫಲ್ಯವೂ ಇದೆ. ಜಾತಿ, ಸಮುದಾಯಕ್ಕೆ ಬಸವಣ್ಣನನ್ನು ಕಟ್ಡಿಹಾಕಿದ್ದೆ ಬಸವಾದಿ ಶರಣರ ವಿಶ್ವಮಾನ್ಯ ವೈಚಾರಿಕ ಧರ್ಮ ಸಂದೇಶಗಳು ತಲುಪುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಗುರು ಬಸವಣ್ಣ ಈ ನೆಲಕ್ಕೆ ಸೀಮಿತವಾಗದೇ ಸಾಮಾಜಿಕ ಕ್ರಾಂತಿಯ ಬಸವ ಸಂದೇಶಗಳು, ವಚನಗಳು ಜಗತ್ತಿಗೆ ತಲುಪುವಂತೆ ಆಗಲು ಇನ್ನಾದರೂ ಪ್ರಾಮಾಣಿಕ‌ ಪ್ರಯತ್ನ ಮಾಡಬೇಕಿದೆ ಎಂದರು.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ