Breaking News

ಇನ್ಮುಂದೆ ವಾಹನ ನೋಂದಣಿ ಮತ್ತಷ್ಟು ದುಬಾರಿ.!

Spread the love

ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿಯಡಿಯಲ್ಲಿ ವಾಹನ ಮರುನೋಂದಣಿ ಹಾಗೂ ಫಿಟ್​ನೆಸ್ ಟೆಸ್ಟ್​ ಶುಲ್ಕವನ್ನು ಹೆಚ್ಚಿಸಿದ್ದು, ಇದರಿಂದಾಗಿ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.ದೇಶದ ಹಳೆಯ ವಾಹನಗಳ ನೋಂದಣಿ (vehicle registration) ಮುಂದಿನ ತಿಂಗಳಿಂದ ಮತ್ತಷ್ಟು ದುಬಾರಿಯಾಗಲಿದೆ.

ವಾಹನ ಗುಜುರಿ ನೀತಿ (vehicle scrappage policy) ಅಡಿಯಲ್ಲಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮರು-ನೋಂದಣಿಯನ್ನು 8 ಪಟ್ಟು ಹೆಚ್ಚಿಸಲಾಗಿದೆ. ಈ ಹೊಸ ದರವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅದರಂತೆ ಒಂದು ದಶಕಕ್ಕಿಂತ ಹಳೆಯದಾದ ವಾಹನಗಳ ನೋಂದಣಿಯನ್ನು ನವೀಕರಿಸುವ ವೆಚ್ಚವು ಮುಂದಿನ ತಿಂಗಳಿನಿಂದ ಎಂಟು ಪಟ್ಟು ಹೆಚ್ಚಾಗಲಿದೆ. ಎಲ್ಲಾ 15 ವರ್ಷ ಹಳೆಯ ಕಾರುಗಳ ನೋಂದಣಿಯನ್ನು ನವೀಕರಿಸುವ ವೆಚ್ಚವು ಪ್ರಸ್ತುತ 600 ರೂ. ಬದಲಿಗೆ 5000 ರೂ. ಆಗಲಿದೆ ಎಂದು ವರದಿಯಾಗಿದೆ.

ಹಾಗೆಯೇ 15 ವರ್ಷ ಹಳೆಯ ದ್ವಿಚಕ್ರ ವಾಹನ ಬಳಕೆದಾರರು ತಮ್ಮ ಬೈಕ್ ಅಥವಾ ಸ್ಕೂಟರ್​ ಅನ್ನು ಮರು ನೋಂದಣಿ ಮಾಡಿಕೊಳ್ಳಲು 300 ರೂ. ಬದಲಿಗೆ 1,000 ರೂ.ಗೆ ಪಾವತಿಸಬೇಕಾಗುತ್ತದೆ. ಇನ್ನು ಆಮದು ಮಾಡಿಕೊಂಡ ಕಾರುಗಳಿಗೆ 15,000 ರೂ.ಗಳ ಬದಲಿಗೆ 40,000 ರೂ, ಜತೆಗೆ ಖಾಸಗಿ ವಾಹನಗಳ ಮರು ನೋಂದಣಿ ವಿಳಂಬವಾದರೆ ತಿಂಗಳಿಗೆ 3000 ರೂ. ವಾಣಿಜ್ಯ ವಾಹನಗಳಿಗೆ ತಿಂಗಳಿಗೆ 500 ರೂ. ಹೆಚ್ಚುವರಿ ದಂಡ ನೀಡಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಣ:
ಹೊಸ ನಿಯಮಗಳ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಪ್ರತಿ ಖಾಸಗಿ ವಾಹನಗಳು ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಏಕೆಂದರೆ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ವಾಹನಗಳು ಕ್ರಮವಾಗಿ 15 ಮತ್ತು 10 ವರ್ಷಗಳ ನಂತರ ನೋಂದಣಿಯಾಗುವುದಿಲ್ಲ. ಹೀಗಾಗಿ ದೆಹಲಿ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲೂ 15 ವರ್ಷಕ್ಕಿಂತ ಹಳೆಯ ವಾಹನಗಳು ಮರು ನೋಂದಣಿಗೆ ಅರ್ಜಿ ಸಲ್ಲಿಸಿ ಫಿಟ್​ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗುತ್ತದೆ.

ಫಿಟ್‌ನೆಸ್ ಟೆಸ್ಟ್ ವೆಚ್ಚ ಕೂಡ ದುಬಾರಿ:
ಹಳೆಯ ಸಾರಿಗೆ ಮತ್ತು ವಾಣಿಜ್ಯ ವಾಹನಗಳ ಫಿಟ್‌ನೆಸ್ ಪರೀಕ್ಷೆಯ ವೆಚ್ಚವೂ ಏಪ್ರಿಲ್‌ನಿಂದ ಹೆಚ್ಚಾಗಲಿದೆ. ಸಾರಿಗೆ ಸಚಿವಾಲಯದ ಪರಿಷ್ಕೃತ ದರಗಳ ಪ್ರಕಾರ, ಏಪ್ರಿಲ್ 1 ರಿಂದ ಟ್ಯಾಕ್ಸಿಗಳಿಗೆ 1,000 ರೂ ಬದಲಿಗೆ ಫಿಟ್ನೆಸ್ ಪರೀಕ್ಷೆಯ ವೆಚ್ಚ 7,000 ರೂ. ಆಗಲಿದೆ. ಹಾಗೆಯೇ ಬಸ್ ಮತ್ತು ಟ್ರಕ್‌ಗಳಿಗೆ 1,500 ರೂ. ಬದಲಿಗೆ 12,500 ರೂ. ಇರಲಿದೆ. ಇದಲ್ಲದೆ, ಎಂಟು ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ