Breaking News

ಆರ್ಥಿಕತೆ ಆಶಾವಾದ: ಕೇಂದ್ರ ಬಜೆಟ್ 2022; ದಿನಗಣನೆ 4

Spread the love

ಸಂಸತ್​ನ ಬಜೆಟ್ ಅಧಿವೇಶನ ಜ.31ರಂದು ಶುರುವಾಗಲಿದೆ. ಫೆ.1ರ ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಕಳೆದ ಶುಕ್ರವಾರ ರಾಷ್ಟ್ರೀಯ ಸಾಂಖ್ಯಿಕ ಕಚೇರಿ 2021-22ರ ರಾಷ್ಟ್ರೀಯ ಆದಾಯದ ಮೊದಲ ಮುಂಗಡ ಅಂದಾಜು ವಿವರಗಳನ್ನು ಪ್ರಕಟಿಸಿದೆ.

ಇದು ವಾರ್ಷಿಕ ಮುಂಗಡಪತ್ರ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರೊಂದಿಗೆ ದೇಶದ ಸದ್ಯದ ಆರ್ಥಿಕ ಸ್ಥಿತಿಗತಿಯ ಅವಲೋಕನ ಇಲ್ಲಿದೆ.

ಕೋವಿಡ್-19 ಸಂಕಷ್ಟದ ಕಾರಣ ಕಳೆದ ಮೂರು ವರ್ಷಗಳಿಂದ ದೇಶದ ಅರ್ಥವ್ಯವಸ್ಥೆಯೂ ಕಠಿಣ ಹಾದಿಯನ್ನು ಎದುರಿಸುತ್ತಿದೆ. ನಿರೀಕ್ಷಿಸಿದಂತೆ ಆರ್ಥಿಕ ಪ್ರಗತಿ ದಾಖಲಾಗಿಲ್ಲ. ಆದಾಗ್ಯೂ ಜಗತ್ತಿನ ಇತರೆ ಅರ್ಥ ವ್ಯವಸ್ಥೆಗಳ ಚೇತರಿಕೆ ಗಮನಿಸಿದರೆ ಭಾರತದ ಅರ್ಥವ್ಯವಸ್ಥೆಯ ಚೇತರಿಕೆ ಆಶಾದಾಯಕ ಬೆಳವಣಿಗೆಯನ್ನು ದಾಖಲಿಸುತ್ತ ಬಂದಿರುವುದು ವಿಶೇಷ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಪ್ರಕಟಿಸಿದ ದತ್ತಾಂಶ ಪ್ರಕಾರ, ದೇಶದ ಜಿಡಿಪಿ ಬೆಳವಣಿಗೆ ಪ್ರಸಕ್ತ ಸಾಲಿನಲ್ಲಿ ಶೇಕಡ 9.2 ತಲುಪಬಹುದು. ಬೆಂಚ್​ವಾರ್ಕ್ ಇಂಡಿಕೇಟರ್ ವಿಧಾನದ ಮೂಲಕ ಈ ಮುನ್ನೋಟವನ್ನು ಎನ್​ಎಸ್​ಒ ಅಂದಾಜಿಸಿದೆ. ಹಾಗಿದ್ದರೂ ಇದು ಭಾರತೀಯ ರಿಸರ್ವ್ ಬ್ಯಾಂಕಿನ ಮುನ್ನೋಟ ಶೇಕಡ 9.5ಕ್ಕೆ ಹೋಲಿಸಿದರೆ ಕಡಿಮೆ ಇದೆ. 2020ನೇ ಸಾಲಿನ ಹಣಕಾಸು ವರ್ಷದಲ್ಲಿದ್ದಂತೆ ಕಠಿಣ ಲಾಕ್​ಡೌನ್​ಗಳು ಇಲ್ಲದ ಕಾರಣ ಭಾರತದ ಆರ್ಥಿಕತೆ ವಾಪಸ್ ಹಳಿಗೆ ಮರಳತೊಡಗಿದೆ ಎಂದು ಪರಿಣತರು ಹೇಳುತ್ತಿದ್ದಾರೆ.

ಆದಾಗ್ಯೂ, ನಿಖರ ಜಿಡಿಪಿ 2020ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇಕಡ 1.3 ಮಾತ್ರ ಏರಿಕೆ ನಿರೀಕ್ಷಿಸಬಹುದಾಗಿದೆ. ಸಾಂಕೇತಿಕ ಜಿಡಿಪಿ ಲೆಕ್ಕಾಚಾರದ ಪ್ರಕಾರ 2021ರ ಹಣಕಾಸು ವರ್ಷದಲ್ಲಿ ಶೇಕಡ 17.6 ಅಂದಾಜಿಸಿದ್ದು ಶೇಕಡ 3 ಕಡಿಮೆ ಆಗಿದೆ. ಕಳೆದ ವರ್ಷ ಫೆಬ್ರವರಿ ಬಜೆಟ್ ಲೆಕ್ಕಾಚಾರ ಪ್ರಕಾರ ಶೇಕಡ 14.4 ಬೆಳವಣಿಗೆ ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ವಿವಿಧ ಅಂದಾಜುಗಳ ಪ್ರಕಾರ, ವಾಸ್ತವ ಜಿಡಿಪಿಗೆ ಒಟ್ಟು ನಿಶ್ಚಿತ ಬಂಡವಾಳ ರಚನೆಯ ಕೊಡುಗೆ ಶೇಕಡ 32.9 ಎಂದು ಪ್ರಸಕ್ತ ವರ್ಷದ ಮಟ್ಟಿಗೆ ಅಂದಾಜಿಸಲಾಗಿದೆ. ಇದು ಕಳೆದ ವರ್ಷ ಶೇಕಡ 31.2, ಹಿಂದಿನ ವರ್ಷ 32.5 ಇತ್ತು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ