ಬೆಳಗಾವಿ: ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್ ನಡೆಸುತ್ತಿರುವ ಪುಂಡಾಟವನ್ನ ಖಂಡಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿವೆ.
ನೈತಿಕ ಬೆಂಬಲ ಬೇಡ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ವಿವಿಧ ಕನ್ನಡಪರ ಸಂಘಟನೆಗಳು ಸಭೆ ನಡೆಸಿದ್ದವು. ಸಭೆ ಬಳಿಕ ವಾಟಾಳ್ ನಾಗರಾಜ್, ಸುದ್ದಿಗೋಷ್ಟಿ ನಡೆಸಿ ಬಂದ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕನ್ನಡಿಗರಿಗೆ ಅಪಮಾನ ಆಗಿದೆ. ಹಾಗಾಗಿ ಬಂದ್ ಬಿಟ್ಟು ಬೇರೆ ದಾರಿಯೇ ಇಲ್ಲ. ಕನ್ನಡ ಬಂದ್ಗೆ ನೈತಿಕ ಬೆಂಬಲ ಬೇಡ. ನೇರವಾಗಿ ಬಂದ್ನಲ್ಲಿ ಪಾಲ್ಗೊಳ್ಳಿ. ಟೌನ್ಹಾಲ್ನಿಂದ ಬಂದ್ ಆರಂಭ ಆಗಲಿದೆ. ಕನ್ನಡದ ಶಕ್ತಿ ಪ್ರದರ್ಶನ ಮಾಡಲೇಬೇಕು. ಪಕ್ಷಾತೀತವಾಗಿ ಬಂದ್ ಆಗಬೇಕು. 31ರೊಳಗೆ ಎಂಇಎಸ್ ನಿಷೇಧ ಮಾಡಿದ್ರೆ ಬಂದ್ ವಾಪಸ್ ಪಡೆಯುತ್ತೇವೆ. 35 ಸಂಘಟನೆಗಳಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.