ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಮೇದಾರ ಸಮಾಜ ಒಕ್ಕೂಟ ವತಿಯಿಂದ ಸುವರ್ಣ ಗಾರ್ಡನ್ ನಲ್ಲಿ ಮನವಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಜಿಲ್ಲೆಯ ಸಮಸ್ತ ಮೇದಾರ ಸಮಾಜದ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜದ ಮುಖಂಡರು ಮನವಿ ಮಾಡಿಕೊಂಡರು.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮೇದಾರ ಸಮಾಜದ ಮುಖಂಡರಾದ ಮಲ್ಲೇಶಿ ಕೊರಡೆ ಅವರು ಮೇದಾರ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ಹಾಗೂ ರಾಜಕೀಯವಾಗಿ ಹಿಂದುಳಿದಿದೆ.ಆದ್ದರಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು ಮಂಗಳವಾರ ಸುವರ್ಣ ಸೌಧ ಬಳಿ ಇರುವ ಸುವರ್ಣ ಗಾರ್ಡನ್ ನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೇದಾರ ಸಮಾಜದ ಮುಖಂಡರಾದ ಪ್ರಕಾಶ ನೇಸರಿಕರ, ರಾಜು ಗೋಕಾಕ್, ಪ್ರಕಾಶ ಹಜಗೋಳಕರ, ವಿಜಯ ಕಾಕತಿಕರ, ಸಾಗರ ಬೆಳಗಾವಂಕರ, ಪ್ರಬಾಕರ ಕಾಕತಿಕರ, ಸಿದ್ದಪ್ಪ ನೇಸರಿಕರ, ಲಕ್ಷ್ಮಣ ಬುರುಡ ಸೇರಿದಂತೆ ಇತರರು ಉಪಸ್ಥಿತರಿದ್ದರು.