ಯಾರಿಗೇ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದು ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ ಎಂದು ಎಂ. ಎಲ್. ಸಿ ತಾರಾ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಮತಾಂತರ ಅನ್ನೋದು ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ
ಆದ್ರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್ ಮೇಲ್ ಆಗಲಿ ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ ವಾಗಿದೆ ಎಂದರು. ಅಂತಹ ಕೆಲಸಕ್ಕೆ ಯಾರಾದ್ರೂ ಕೈಹಾಕಿದ್ರೆ ಅದು ಶಿಕ್ಷೆಗೆ ಅರ್ಹ ಅನ್ನೋದು ನಮ್ಮ ಆಸೆ. ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ ಆಗಿದೆ ಎಂದರು. ಇನ್ನು ಕಾಂಗ್ರೆಸ್ ಪ್ರತಿಭಟನೆ ಮಾಡೋದು ಅವರ ವೈಯಕ್ತಿಕ ವಿಚಾರ. ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ ಎಂದರು.