ಮತಾಂತರ ನಿಷೇಧ ಕಾಯ್ದೆಯನ್ನು ಹೊಸದಾಗಿ ಯಾವ ರೀತಿ ತರುತ್ತಾರೆ ಗೊತ್ತಿಲ್ಲ. ತಂದರೂ ಕೂಡ ಅದು ಸ್ಟಾಂಡ್ ಆಗುವುದಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿಯಿಂದ ಗೆಲ್ಲುವ ಶಕ್ತಿನೂ ಇಲ್ಲ, ದೂರದೃಷ್ಟಿಯೂ ಇಲ್ಲ, ಅವರಿಗೆ ಏನಿದ್ದರೂ ಕೂಡ ಸಮಾಜ, ಧರ್ಮಗಳನ್ನು ಒಡೆಯುವುದು ಒಂದೇ ಕೆಲಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ಮಾಡಿದರು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಬಿಜೆಪಿಯವರು ಆರು ತಿಂಗಳಿಗೊಂದು ಹೊಸದು ಮಾಡುತ್ತಾರೆ. ಅದು ಹಳೆಯ ಕಾಯ್ದೆ, ಸಂವಿಧಾನದಲ್ಲಿ ಈ ಕಾಯ್ದೆ ಈಗಾಗಲೇ ಇದೆ. ಹೊಸದು ಏನಿಲ್ಲ. ಸಿಎಎ, ಎನ್‍ಆರ್‍ಸಿ ಹಳೆಯ ಕಾಯ್ದೆಯಲ್ಲಿಯೇ ಇವೆ. ಸುಮ್ಮನೇ ತರೋದು ಒಂದು ವರ್ಷ ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತಾರೆ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.