ವಿಜಯಪುರ ಬಾಗಲಕೋಟ ವಿಧಾನಪರಿಷತ್ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷೇತರ ಅಭ್ಯರ್ಥಿ ಅಶ್ಲೀಲ ಸಿಡಿ ವೈರಲ್ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆ ಸೋಲಿನ ಭಯದಿಂದ ಚಾರಿತ್ರ್ಯ ವಧೆ ಮಾಡಲು ನಕಲಿ ಸಿಡಿ ತಯಾರಿಸಿ ಹರಡುತ್ತಿದ್ದಾರೆ ಎಂಬ ಮಾಹಿತಿ ಇದೆ, ಜಿಲ್ಲೆಯಲ್ಲಿ ಎರಡು ಪಕ್ಷಗಳ ನಕಲಿ ಸಿಡಿ ಫ್ಯಾಕ್ಟರಿ ಇದೆ ಎಂದು ಈ ಹಿಂದೆ ಜಿಲ್ಲೆಯ ಶಾಸಕರೊಬ್ಬರು ಹೇಳಿದ್ದರು ಅದು ಈಗ ನಿಜ ಎನಸ್ತಿದೆ ಎಂದಿದ್ದಾರೆ. ಅಲ್ಲದೇ ರಾಜಕೀಯ ಸೋಲಿನ ಭಯದಿಂದ ರಾಜಕಾರಣಿಗಳು ಅಶ್ಲೀಲ ಮಟ್ಟಕ್ಕೆ ಹೋಗುವದು ತೀರ ನಾಚಿಕೇಗೇಡು ಎಂದು ಹರಿಹಾಯ್ದಿದ್ದಾರೆ.ನನ್ನ ಬೆಂಬಲಕ್ಕೆ ನೀವು ಇರ್ರಿ, ಮುಂದಿನ ದಿನಗಳಲ್ಲಿ ಮಾನನಷ್ಟ ಮೊಕದ್ದಮೆ ಹಾಕ್ತಿನಿ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಲೋಣಿ ಸ್ಪಷ್ಟನೆ ನೀಡಿದ್ದಾರೆ.