ಬೆಂಗಳೂರು: ಕೊರೊನಾ ಮೂರನೇ ಅಲೆ, ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ತಡೆಗಟ್ಟಲು ರಾಜ್ಯ ಸರ್ಕಾರ ಸಜ್ಜುಗೊಂಡಿದ್ದು, ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಒಮಿಕ್ರಾನ್ ನಿಯಂತ್ರಣ ಜವಾಬ್ದಾರಿಯನ್ನು ಐಎಎಸ್ ಅಧಿಕಾರಿಗಳ ಹೆಗಲಿಗೆ ವಹಿಸಲಾಗಿದ್ದು, ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ರಾಜ್ಯ ಕೋವಿಡ್ ವಾರ್ ರೂಮ್ ನಿರ್ವಹಣೆ, ಆಕ್ಸಿಜನ್ ನಿರ್ವಹಣೆ- ಮನೀಶ್ ಮೌದ್ಗಿಲ್
ಹೋಮ್ ಐಸೋಲೇಷನ್ ನಿರ್ವಹಣೆ – ಪಂಕಜ್ ಕುಮಾರ್ ಪಾಂಡೆ
ವಿದೇಶಿ ಪ್ರಯಾಣಿಕರ ತಪಾಸಣೆ, ಸ್ಕ್ರೀನಿಂಗ್ – ಎಂ.ಶಿಖಾ
ಆಕ್ಸಿಜನ್ ಸರಬರಾಜು – ಪ್ರತಾಪ್ ರೆಡ್ದಿ, ಗುಂಜನ್ ಕೃಷ್ಣಾ
ಸರ್ವೆಲೆನ್ಸ್ ನೋಡಲ್ ಆಫೀಸರ್ ವಿಭಾಗ – ಶಿಲ್ಪಾ ನಾಗ್
ಹಾಸ್ಪಿಟಲ್ ಬೆಡ್ ನಿರ್ವಹಣೆ – ಕುಮಾರ್ ಪುಷ್ಕರ್
ಔಷಧ ನಿರ್ವಹಣೆ – ಎಂ.ಟಿ.ರೇಜು ಅವರುಗೆ ಜವಾಬ್ದಾರಿ ವಹಿಸಿ ಸರ್ಕಾರ ಆದೇಶ ನೀಡಿದೆ.