ನವದೆಹಲಿ,ನ.20- ಜಾರ್ಖಂಡ್‍ನ ಧನ್‍ಬಾದ್ ವಿಭಾಗದಲ್ಲಿ ರೈಲು ಹಳಿಯ ಮೇಲೆ ಸ್ಫೋಟ ಸಂಭವಿಸಿ ಒಂದು ಡೀಸೆಲ್ ಎಂಜಿನ್ ಹಳಿತಪ್ಪಿದ ಘಟನೆ ಇಂದು ಮುಂಜಾನೆ ಜರುಗಿದೆ. ಇದು ಒಂದು ಬಾಂಬ್ ಸ್ಫೋಟವಾಗಿದ್ದು ಧನಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಣದ ನಡುವೆ ಸೋಟಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಒಂದು ನಕ್ಸಲ್ ಸಂಬಂತ ಘಟನೆಯಾಗಿದೆ ಎಂದು ಮೂಲಗಳು ಸೂಚಿಸಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಹಳಿಯ ಮೇಲೆ ಸಂಚಾರ ಪುನರಾರಂಭವಾಗುವುದನ್ನು ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Laxmi News 24×7