ಮುಂಬೈ, – ಕೊರೊನಾ ದಿಂದಾಗಿ ನಲುಗುತ್ತಿರುವ ಜನರ ನೆರವಿಗಾಗಿ 25 ಕೋಟಿ ನೆರವು ನೀಡಿದ್ದ ಬಾಲಿವುಡ್ ನಟ ಅಕ್ಷಯ್‍ಕುಮಾರ್ ಅವರು ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಪರಿಹಾರಕ್ಕೆ 1 ಕೋಟಿ ರೂ. ದೇಣಿಗೆಯನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಸ್ಸಾಂನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನರು ಮನೆ, ಆಸ್ತಿ- ಪಾಸ್ತಿ, ಧವಸಧಾನ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ, ಇದನ್ನು ಅರಿತ ಅಕ್ಕಿ ಸಂತ್ರಸ್ತರ ನೆರವಿಗೆ ಮುಂದಾಗಿದ್ದು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ, ಕಳೆದ ಬಾರಿ ಅಸ್ಸಾಂನಲ್ಲಿ ಪ್ರವಾಹ ಉಂಟಾದಾಗಲೂ ಅಕ್ಷಯ್‍ಕುಮಾರ್ 2 ಕೋಟಿ ರೂ. ನೆರವು ನೀಡಿದ್ದರು.
ಅಕ್ಷಯ್‍ಕುಮಾರ್‍ರ ಔದಾರ್ಯತೆ ಯನ್ನು ಪ್ರಶಂಶಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ನಮ್ಮ ರಾಜ್ಯದಲ್ಲಿ ಸಂಕಷ್ಟಗಳು ಎದುರಾಗಲೆಲ್ಲಾ ನೀವು ನಮಗೆ ನೆರವು ನೀಡುತ್ತಿರುವ ನಿಮ್ಮ ಸಹಾಯವನ್ನು ನಾನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ,
ನೀವು ಒಳ್ಳೆ ಹೃದಯವಿರುವ ನಟ ದೇವರು ನಿಮಗೆ ಇನ್ನೂ ಹೆಚ್ಚಿನ ಸಮಾಜಸೇವೆಯನ್ನು ಮಾಡುವ ಶಕ್ತಿ ನೀಡಲಿ, ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಅವರು ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.