ಅಥಣಿ: ಕಳೆದ ಬಾರಿ ಕೃಷ್ಣಾ ನದಿಯ ನೆರೆ ಸಂತ್ರಸ್ತರಿಗೆ ಪರಿಹಾರ ತ್ವರಿತ ಗತಿಯಲ್ಲಿ ಹಣ ಬಿಡುಗಡೆ ಮಾಡುವಂತೆ ಡಿಸಿಎಂ ಸವದಿ ಮತ್ತು ನಾನು ಜೊತೆಗುಡಿ ಸಿಎಂ ಯಡಿಯೂರಪ್ಪ ಬೇಟಿ ಮಾಡಿದ್ದೆವೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಅವರು ತಾಲೂಕಿನಲ್ಲಿ ಬುರ್ಲಟ್ಟಿ ಗ್ರಾಮದಲ್ಲಿ ನೂತನವಾಗಿ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ. ಕಳೆದ ಬಾರಿಯ ಕೃಷ್ಣಾ ನದಿ ಪ್ರವಾಹದ ೬೦ರಷ್ಟು ಸಂತ್ರಸ್ತರ ಪರಿಹಾರ ಹಣ ಸಂದಾಯ ವಾಗಿದೆ. ಕೊರೊನಾ ವೈರಸ್ ನಿಂದ ಪರಿಹಾರ ಬಿಡುಗಡೆ ವಿಳಂಬವಾಗಿ. ಇನ್ನು ಕೆಲವು ನೆರೆ ಸಂಭವಿಸಿದ ಗ್ರಾಮದಲ್ಲಿ ಸನ್ನ ಲೋಪದೋಷಗಳಿಂದ ಸಂತ್ರಸ್ತರ ಖಾತೆಗಳಿಗೆ ಹಣ ಸಂದಾಯ ಬಾಕಿ ಊಳಿದೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.
ಅಥಣಿ ತಾಲೂಕಿನ ಅಭಿವೃದ್ಧಿಗೆ ಇದುವರೆವಿಗೂ ೫೫೦ ಕೋಟಿಗೂ ಅಧಿಕ ರಾಜ್ಯ ಸರ್ಕಾರದಿಂದ ಅಥಣಿ ವಿಧಾನಸಭಾ ಕ್ಷೇತ್ರದ ಹಣ ಬಿಡುಗಡೆ ಮಾಡಲಾಗಿದೆ. ಬಿ ಎಸ್ ಯಡಿಯೂರಪ್ಪನವರು ಹಾಗೂ ಹಿಂದಿನ ಸರ್ಕಾರಗಳು ಹಣ ಬಿಡುಗಡೆ ಮಾಡಿದ್ದಾರೆ. ಮತ್ತು ಅಥಣಿ ಪಟ್ಟನ ಅಭಿವೃದ್ಧಿಗೆ ೨೨ ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ, ಅಥಣಿ ಪೂರ್ವ ಭಾಗದ ರಸ್ತೆಗಳನ್ನು ಹಂತಹಂತವಾಗಿ ಸುಗಮ ಸಂಚಾರ ರಸ್ತೆ ನಿರ್ಮಾಣ ಮಾಡಲಾಗುವುದು. ಹಾಗೂ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ನಾವು ಜೋತೆಗುಡಿ ಇನ್ನೂ ಹೆಚ್ಚಿನ ಅನುದಾನ ತರುತ್ತೆವೆ ಎಂದು ಹೇಳಿದರು.