ಘಟಪ್ರಭಾ ಪೋಲೀಸ್ ಠಾಣೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ ನೆರವೇರಿಸಿದ ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ,
ಬೆಳಗಾವಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸುದ್ದಿ ಮಾಡಿದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಒಂದು ಕಡೆ ಆದರೆ
ಘಟಪ್ರಭಾದ ಪೋಲೀಸ್ ಠಾಣೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆಯನ್ನು ನೆರವೇರಿಸಿದ ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ, ರಾಷ್ಟ್ರೀಯ ಭಾವೈಕ್ಯತೆಯ ಭಾವನೆ ಬೆಳೆಸುವದರೊಂದಿಗೆ ಘಟಪ್ರಭಾದ ನಾಗರಿಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ
ಘಟಪ್ರಭಾ ಪೋಲೀಸ್ ಠಾಣೆಯಲ್ಲಿ ಶ್ರೀ ಗಣೇಶ ಉತ್ಸವದ ಅಂಗವಾಗಿ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಶುಕ್ರವಾರ ದಿನಾಂಕ 29-08-2025 ರಂದು ಭಕ್ತಿ ಭಾವದಿಂದ ಆತ್ಮೀಯ ವಾತಾವರಣ ದಲ್ಲಿ ನಡೆದವು ಕಾರ್ಯಕ್ರಮದಲ್ಲಿ ಗೋಕಾಕ ತಹಶೀಲ್ದಾರ್ ಶ್ರೀ ಮೋಹನ ಭಸ್ಮೆ ಗ್ರಾಮಮಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಹಂಚಿನಾಳ, ಸಹಾಯಕರಾದ ಕೃಷ್ಣಮೂರ್ತಿ ದೇಸಾಯಿ,, ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ ಪಿ ಎಸ್ ಐ ಕಣವಿ,ಎ ಎಸ್ ಆಯ್ ಪ್ರಭಾಕರ ಪಾಟೀಲ, ಸಿಬ್ಬಂದಿಗಳಾದ ರಾಜು ಧುಮಾಳೆ, ವಿಠ್ಠಲ ಕೋಳಿ ಮಠ ಪತಿ, ಬಿ ಎಸ್ ನಾಯಿಕ, ಹಣಮಂತ ಮಲ್ಲಾಡದ ಸೇರಿದಂತೆ ಘಟಪ್ರಭಾ ಹಾಗೂ ಸುತ್ತಮುತ್ತಲಿನ ಗಣ್ಯ ನಾಗರಿಕರು, ಮುಖಂಡರು ಪತ್ರಕರ್ತರು ಸಮಾಜ ಸೇವಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು